ಹೊಸ ವರ್ಷದ ಆರಂಭದಲ್ಲಿ ನಡೆಯಲಿರುವ ಕ್ರಿಕೆಟ್ ಜಾತ್ರೆ ಅಂದ್ರೆ ಅದು ಚಾಂಪಿಯನ್ಸ್ ಟ್ರೋಫಿ. ಮೊದಲ ತಂಡದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಇದೆ.
ಪಾಕಿಸ್ತಾನ ಮತ್ತು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಆದರೆ ವಿಶೇಷ ಎಂದರೆ ಭಾರತ ಆಡುವ ಯಾವ ಪಂದ್ಯಗಳೂ ಪಾಕಿಸ್ತಾನದಲ್ಲಿ ನಡೆಯಲ್ಲ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಆಡಲಿರುವ ಮೊದಲ ಪಂದ್ಯ ಬಾಂಗ್ಲಾದೇಶ ವಿರುದ್ಧ. ಆ ಪಂದ್ಯ ದುಬೈನಲ್ಲಿ ನಡೆಯಲಿದೆ. ಭಾರತ ಆಡಲಿರುವ 2ನೇ ಪಂದ್ಯ ಫೆಬ್ರವರಿ 23ರಂದು ಪಾಕಿಸ್ತಾನದ ವಿರುದ್ಧ. ಅದೂ ದುಬೈನಲ್ಲೇ ನಡೆಯಲಿದೆ. ಮೊದಲ ತಂಡದಲ್ಲಿ ಭಾರತ ಆಡಲಿರುವ ಮೂರನೇ ಪಂದ್ಯ ನ್ಯೂಜಿಲೆಂಡ್ ವಿರುದ್ಧ. ಆ ಪಂದ್ಯ ಕೂಡಾ ಮಾರ್ಚ್ 2ರಂದು ದುಬೈನಲ್ಲೇ ನಡೆಯಲಿದೆ.
ಒಂದು ವೇಳೆ ಭಾರತ ಸೆಮಿಫೈನಲ್ಗೆ ಪ್ರವೇಶಿಸಿದರೆ ಮೊದಲ ಸೆಮಿಫೈನಲ್ ಕೂಡಾ ದುಬೈನಲ್ಲೇ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿದ್ರೆ ಆಗ ಲಾಹೋರ್ ಬದಲು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡುವುದಕ್ಕೆ ನಿರ್ಧರಿಸಲಾಗಿದೆ.
ಗ್ರೂಪ್ ಎನಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಈ ಮೂರು ತಂಡಗಳ ನಡುವಿನ ಎಲ್ಲಾ ಲೀಗ್ ಪಂದ್ಯಗಳು ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಡೆಯಲಿದೆ.
ಅದೇ ರೀತಿ ಗ್ರೂಪ್ ಬಿನಲ್ಲಿರುವ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಲೀಗ್ ಪಂದ್ಯಗಳೆಲ್ಲವೂ ಪಾಕಿಸ್ತಾನದಲ್ಲೇ ನಡೆಯಲಿದೆ.
ಪಾಕಿಸ್ತಾನದಲ್ಲೇ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳ ಪೈಕಿ ಭಾರತ ಆಡಲಿರುವ ಪಂದ್ಯಗಳನ್ನಷ್ಟೇ ಪಾಕಿಸ್ತಾನದ ಬದಲು ದುಬೈನಲ್ಲಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.
ಪಾಕಿಸ್ತಾನ ಭಾರತದ ಬದ್ಧವೈರಿಯಾಗಿದ್ದರೆ, ನೆರೆಯ ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಮತ್ತು ಅಲ್ಲಿ ಹಿಂದೂಗಳ ಮೇಲಾಗುತ್ತಿರುವ ಹಿಂಸಾಚಾರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳಿಗಿರುವಷ್ಟೇ ರೋಷಾವೇಶ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲೂ ಭಾರತದ ಅಭಿಮಾನಿಗಳಲ್ಲಿ ಇರಲಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾ ಎರಡೂ ದೇಶಗಳು ಗ್ರೂಪ್ ಎನಲ್ಲೇ ಭಾರತದ ವಿರುದ್ಧ ಆಡಲಿರುವ ಚಾಂಪಿಯನ್ಸ್ ಟ್ರೋಫಿಯ ನಿರೀಕ್ಷೆಯನ್ನು ಹೆಚ್ಚಳ ಮಾಡಿದೆ.
ADVERTISEMENT
ADVERTISEMENT