ಕಾಂಗ್ರೆಸ್ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣೆ (Congress President Election) ಗರಿಗೆದರಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್ಗೆ ಸೋನಿಯಾ ಗಾಂಧಿ ಅನುಮತಿ ನೀಡಿದೆ ಬೆನ್ನಲ್ಲೇ, ಮತ್ತಷ್ಟು ನಾಯಕರು ಚುನಾವನೆಗ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿ ಇಂದು ವೇಳಾಪಟ್ಟಿ ಪ್ರಕಟಿಸಿದೆ.
ಇಂದು ಗುರುವಾರ ಸೆ.22 ರಿಂದಲೇ ಚುನಾವಣೆ ಅಧಿಸೂಚನೆ ಜಾರಿಗೆ ಬರಲಿದ್ದು, ಸೆ. 24 ರಿಂದ 30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅ.1ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಲಿದೆ. ಕ್ರಮ ಬದ್ಧವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಂದೇ ಘೋಷಿಸಲಾಗುತ್ತದೆ.
ನಾಮಪತ್ರ ಹಿಂಪಡೆಯಲು ಅ. 8 ಕೊನೆ ದಿನ. ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಪಟ್ಟಿ ಅದೇ ದಿನ ಬಿಡುಗಡೆ. ಅ. 17ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 4ರ ವರೆಗೆ ಮತದಾನ ನಡೆಯಲಿದೆ. ಅ. 19ರಂದು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ : Paycm Poster : ಪೇಟಿಎಂ ಮಾದರಿಯಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿ ವಿನೂತನ ಪ್ರತಿಭಟನೆ
ನಾಮಪತ್ರ ಅರ್ಜಿಗಳು ಎಐಸಿಸಿ ಕೇಂದ್ರ ಕಚೇರಿಯಲ್ಲಿ ದೊರೆಯಲಿದೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಮುಖಂಡ ಮಧುಸೂದನ ಮಿಸ್ತ್ರಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ.
Congress issues notification for the party president elections
Nominations to be filed from Sep 24 to Sep 30. If necessary, voting will be held on Oct 17 and the result for the same will be declared on Oct 19 pic.twitter.com/r032tslwyM
— ANI (@ANI) September 22, 2022
ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ (Congress President Election) ದೇಶದಲ್ಲಿ ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿಯರವೇ ಅಧ್ಯಕ್ಷರಾಗಲಿ ಎಂದು ಹಲವು ಪಿಸಿಸಿಗಳು (ರಾಜ್ಯ ಕಾಂಗ್ರೆಸ್ ಘಟಕಗಳು) ನಿರ್ಣಯ ಕೈಗೊಂಡಿವೆ. ಹಲವು ನಾಯಕರು ರಾಹುಲ್ ಮೇಲೆ ಒತ್ತಡವನ್ನೂ ಹೇರಿದ್ದಾರೆ.
ಈ ಮಧ್ಯೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಶಶಿ ತರೂರ್ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ್ ಕಮಲ್ ನಾಥ್ ಅವರೂ ಸಹಿತ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : Jammu And Kashmir : ಕಾಂಗ್ರೆಸ್ಗೆ ಮತ್ತೊಂದು ಅಘಾತ – 51 ಮಂದಿ ಸಾಮೂಹಿಕ ರಾಜೀನಾಮೆ