ಕರಾವಳಿ ತೀರದ ಉಡುಪಿಯ ಮಲ್ಪೆ ಬೀಚ್ನಲ್ಲಿ ಕರ್ನಾಟಕದ ಮೊದಲ ತೇಲುವ ಸೇತುವೆ ಇಂದು ಲೋಕಾರ್ಪಣೆಗೊಂಡಿದೆ. ಮಲ್ಪೆ ಬೀಚ್ಗೆ ಬಂದ ಪ್ರವಾಸಿಗರು ಸಮುದ್ರದ ಅಲೆಗಳ ಮಧ್ಯೆ ತೇಲುವ ಸೇತುವೆಯಲ್ಲಿ ನಡೆದು ಖುಷಿಯ ಅನುಭವವನ್ನು ಪಡೆದುಕೊಂಡಿದ್ದಾರೆ.
ಇಂದು ಈ ತೇಲುವ ಸೇತುವೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಉದ್ಘಾಟನೆ ಮಾಡಿದ್ದಾರೆ.
ಸಮುದ್ರದ ದಡದಿಂದ 100 ಮೀಟರ್ ಉದ್ದವಿರುವ ಈ ತೇಲುವ ಸೇತುವೆಯಲ್ಲಿ ಪ್ರವಾಸಿಗರು ನಡೆದಾಡಬಹುದು. ಆ ಮೂಲಕ ಸಮುದ್ರದ ಅಲೆಗಳ ಮೇಲೆ ನಡೆದಾಡುವ ಅನುಭವವನ್ನು ಪಡೆಯಬಹುದಾಗಿದೆ. ಈ ತೇಲುವ ಸೇತುವೆಯ ಬಗ್ಗೆ ಪ್ರವಾಸಿಗರು ಬಹು ಉತ್ಸುಕತೆಯನ್ನು ತೋರಿಸಿದ್ದಾರೆ.
ಉಡುಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಈ ಸೇತುವೆ ಹೆಚ್ಚುವರಿ ಆಕರ್ಷಣೆಯಾಗಲಿದೆ. ಸ್ಥಳೀಯ ಮೂವರು ಉದ್ಯಮಿಗಳು ಸೇರಿ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ 100 ಮೀ. ಉದ್ದವಿದೆ. 3.5 ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ.
ಈ ತೇಲುವ ಸೇತುವೆ ಮೇಲೆ ಹೋಗಲು ಪ್ರತಿ ವ್ಯಕ್ತಿ 100 ಪಾವತಿಸಬೇಕು ಮತ್ತು ಲೈಫ್ ಜಾಕೆಟ್ ಧರಿಸಿ 15 ನಿಮಿಷಗಳ ಕಾಲ ಸೇತುವೆಯ ಮೇಲೆ ನಡೆಯಬಹುದು. ಪ್ರವಾಸಿಗರ ಸುರಕ್ಷತೆಗಾಗಿ ಸೇತುವೆಯ ಮೇಲೆ 10 ಲೈಫ್ ಗಾರ್ಡ್ಗಳು ಮತ್ತು 30 ಲೈಫ್ಬಾಯ್ ರಿಂಗ್ಗಳು ಇರುತ್ತವೆ.