ಶಾಲಾ ಪಠ್ಯಪುಸ್ತಕ ಬದಲಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಇತರ ಸಂಘಟನೆಗಳ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವಲ್ಲೇ ಪರಿಷ್ಕೃತ ಪಠ್ಯಪುಸ್ತಕಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷ್ಕೃತ ಪಠ್ಯಪುಸ್ತಕಗಳನ್ನು ಕೈಬಿಡುವುದಿಲ್ಲ. ಆದರೆ, 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸಮಾಜ ಸುಧಾರಕ ಬಸವಣ್ಣನವರ ಕುರಿತ ಅಧ್ಯಾಯಗಳ ಮರು ಪರಿಷ್ಕರಣೆ ಕುರಿತು ವಿವಿಧ ಮಠಗಳ ಸ್ವಾಮೀಜಿಗಳು ನೀಡಿರುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
ಕಳೆದ ವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಿಸಿದ ಬಸವಣ್ಣನ ಅಧ್ಯಾಯವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ಆದರೆ, ಅದಕ್ಕೂ ಆಕ್ಷೇಪಗಳು ಕೇಳಿಬಂದಿವೆ. ಹೀಗಾಗಿ ನಾವು ಸ್ವಾಮೀಜಿಗಳು ನೀಡುವ ಪತ್ರಗಳಿಗಾಗಿ ಕಾಯುತ್ತಿದ್ದೇವೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಪಾಠದಲ್ಲಿ ತಪ್ಪಿದ ಪದ ಅಥವಾ ಸಾಲನ್ನು ಉಳಿಸಿಕೊಳ್ಳಲಾಗುವುದು ಎಂದರು. “ಪುಸ್ತಕಗಳು ಸಾರ್ವಜನಿಕ ಮುಂದೆ ಇಡಲಾಗುತ್ತದೆ. ನಂತರ, ಜನರು ಯಾವುದೇ ಆಕ್ಷೇಪಣೆಗಳನ್ನು ಮಾಡಿದರೆ, ಆ ಕುರಿತು ತಿದ್ದುಪಡಿ ಮಾಡಲು ನಾವು ಸಿದ್ಧರಿದ್ದೇವೆ, ಆದರೆ, ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ಪ್ರತ್ಯೇಕ ಸಮಿತಿ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದ್ವಿತೀಯ ಪಿಯುಸಿ ಪಠ್ಯಪುಸ್ತಕಗಳಲ್ಲಿ ಅಧ್ಯಾಯ 4.2 (ಹೊಸ ಧರ್ಮಗಳ ಹುಟ್ಟು) ಪರಿಷ್ಕರಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ಒಮ್ಮೆ ವಿಸರ್ಜಿಸಿದರೆ, ಆ ಸಮಿತಿಯ ವರದಿಯನ್ನು ಸಲ್ಲಿಸುವ ಅಥವಾ ಸ್ವೀಕರಿಸುವುದಿಲ್ಲ. ಸಮಿತಿಯು ಒಂದು ಅಧ್ಯಾಯದ ಪರಿಷ್ಕರಣೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಸಮಿತಿ ವಿಸರ್ಜಿಸಲಾಗಿರುವ ಹಿನ್ನೆಲೆಯಲ್ಲಿ ನಿರ್ಧಾರಗಳ ಕೈಬಿಡಲಾಗಿದೆ ಎಂದು ಬಿಸಿ ನಾಗೇಶ್ ಹೇಳಿದ್ದಾರೆ.