ದೇಶ ಬಿಟ್ಟು ಓಡಿಹೋಗಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಪ್ರಕರಣ ದಾಖಲಾಗಿದೆ.
ಈ ಮೂರನೇ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಹಾಕಲಾಗಿರುವ ಸೆಕ್ಷನ್ಗಳು ಜೆಡಿಎಸ್ ಯುವ ನಾಯಕನ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಿದರೂ ಅಚ್ಚರಿಯಿಲ್ಲ.
ಹೊಳೆನರಸೀಪುರದಲ್ಲಿರುವ ಹೆಚ್ ಡಿ ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದ 60 ವರ್ಷ ವಯಸ್ಸಿನ ಮಹಿಳೆ ನೀಡಿದ್ದ ಹೇಳಿಕೆ ಆಧರಿಸಿ ವಿಶೇಷ ತನಿಖಾ ತಂಡ ಎಫ್ಐಆರ್ ದಾಖಲಿಸಿದೆ.
ಐಪಿಸಿ ಕಲಂ 376 (2) (ಎನ್) – ಮಹಿಳೆ ಮೇಲೆ ನಿರಂತರ ಅತ್ಯಾಚಾರ
ಐಪಿಸಿ ಕಲಂ 376 (2) (ಕೆ) – ಅಧಿಕಾರದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ
ಐಪಿಸಿ 354 (ಎ) – ಲೈಂಗಿಕ ಕಿರುಕುಳ
ಐಪಿಸಿ 354 (ಬಿ) – ಮಹಿಳೆಯನ್ನು ಬಲವಂತವಾಗಿ ವಿವಸ್ತ್ರಗೊಳಿಸುವುದು
ಐಪಿಸಿ 354 (ಸಿ) – ಮಹಿಳೆಯನ್ನು ಬೆತ್ತಲೆಗೊಳಿಸಿ ಕಾಮತೃಷೆ ತೀರಿಸಿಕೊಳ್ಳುವುದು
ಇವುಗಳಲ್ಲಿ ಮೊದಲ ಎರಡು ಕಲಂಗಳಲ್ಲಿ ಎಸಗಲಾಗಿರುವ ಅಪರಾಧ ಸಾಬೀತಾದರೆ ಆಗ ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಬೇಕಾಗುತ್ತದೆ. ಅಪರೂಪದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಆರೋಪ ಸಾಬೀತಾದ ಅಪರಾಧಿಯ ಜೀವಿತಾವಧಿವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ.
ಮೇ 4ರಂದು ಈ ಮಹಿಳೆಯನ್ನು ಮೈಸೂರು ಜಿಲ್ಲೆಯ ಕಲ್ಲೇನಹಳ್ಳಿಯಲ್ಲಿರುವ ತೋಟದ ಮನೆಯಿಂದ ರಕ್ಷಣೆ ಮಾಡಲಾಗಿತ್ತು.
ಬಳಿಕ ಈಕೆ ಬೆಂಗಳೂರಲ್ಲಿ ನ್ಯಾಯಾಧೀಶರ ಎದುರು ಹಾಜರಾಗಿ ಸಿಆರ್ಪಿಸಿ 164ರಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ಈ ಮಹಿಳೆಯನ್ನು ಅಪಹರಿಸಿದ ಆರೋಪದಡಿಯಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿ ಬಂಧನವೂ ಆಗಿದೆ.
ADVERTISEMENT
ADVERTISEMENT