ಭಾರತದ ಅತ್ಯಂತ ನಿರ್ಮಲ ನಗರ ಎಂಬ ಖ್ಯಾತಿ ಪಡೆದುಕೊಂಡಿರುವ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಇನ್ಮುಂದೆ ಭಿಕ್ಷುಕರಿಗೆ ಕಾಸು ಹಾಕುವವರ ವಿರುದ್ಧವೇ ಎಫ್ ಐಆರ್ ದಾಖಲಾಗುತ್ತದೆ.
ಹೌದು, ಇಂದೋರ್ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದ್ದು, ಭಿಕ್ಷುಕರಿಗೆ ದಯೆ ತೋರಿದ್ರೆ ಇನ್ಮುಂದೆ ಸಂಕಷ್ಟ ಎದುರಿಸಬೇಕಾಗುತ್ತೆ ಎನ್ನುವ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ಜನರಿಗೆ ನೀಡಿದೆ.
ದೇಶದಲ್ಲಿ ಅತ್ಯಂತ ನೈರ್ಮಲ್ಯತೆ ಕಾಪಾಡಿಕೊಂಡಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂದೋರ್ ನಲ್ಲಿ ಇದೀಗ ಭಿಕ್ಷಾಟನೆ ನಿರ್ಮೂಲನಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದರಂತೆ ಇಂದೋರ್ ನಗರದ ಬೀದಿಗಳನ್ನು ಭಿಕ್ಷುಕರಿಂದ ಮುಕ್ತ ಮಾಡುವ ಪ್ರಯತ್ನ ಮಾಡಲಾಗ್ತಿದೆ. ನಿರಾಶ್ರಿತ ಭಿಕ್ಷುಕರಿಗೆ ಸೂರು ಕಲ್ಪಿಸಿಕೊಡಲಾಗುತ್ತೆ. ಇನ್ನು ನಿರಾಶ್ರಿತ ಭಿಕ್ಷುಕರಿಗೆ ಆಶ್ರಯ ನೀಡಲು ಕೇಂದ್ರ ಸರ್ಕಾರ ಪ್ರಾಯೋಗಿಕ ಯೋಜನೆಯನ್ನೂ ಜಾರಿಗೊಳಿಸಲಿದೆ ಅಂತ ಜಿಲ್ಲಾಡಳಿತ ತಿಳಿಸಿದೆ.
. ಈ ಯೋಜನೆ ದೇಶದ ೧೦ ನಗರಗಳಾದ ದೆಹಲಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಲಖನೌ, ಮುಂಬೈ, ನಾಗ್ಪುರ, ಪಾಟ್ನಾ ಮತ್ತು ಅಹಮದಾಬಾದ್ ನಲ್ಲೂ ಜಾರಿಗೆ ಬರಲಿದೆ.
ಭಿಕ್ಷಾಟನೆ ನಿಯಂತ್ರಿಸೋ ಸಲುವಾಗಿ ಕೈಗೊಳ್ಳಲಾಗಿರುವ ಈ ಅಭಿಯಾನದ ಪ್ರಕಾರ ಈ ವರ್ಷದ ಅಂತ್ಯದವರೆಗೂ ಅಂದರೆ ಡಿಸೆಂಬರ್ ೩೧ರವರೆಗೂ ಮಾತ್ರ ಭಿಕ್ಷಾಟನೆಗೆ ಅವಕಾಶವಿದ್ದು, ಜನವರಿ ೦೧ರ ಬಳಿಕ ಭಿಕ್ಷಾಟನೆಗೆ ಸಹಕರಿಸುವವರು ಮತ್ತು ಭಿಕ್ಷುಕರಿಗೆ ದಯೆ ತೋರಿ ಅವರಿಗೆ ಕಾಸು ಕೊಟ್ಟಂತವರ ಮೇಲೆ ಮುಲಾಜಿಲ್ಲದೆ ಎಫ್ಐಆರ್ ದಾಖಲಾಗುತ್ತೆ.
ಇನ್ನು ಈ ಅಭಿಯಾನದ ಮೂಲಕ ಭಿಕ್ಷಾಟನೆ ಜಾಲಕ್ಕಾಗಿ ಮಾನವ ಕಳ್ಳಸಾಗಾಣೆಗೂ ಬ್ರೇಕ್ ಹಾಕುವ ಉದ್ದೇಶವನ್ನೂ ಹೊಂದಿದೆ.
ADVERTISEMENT
ADVERTISEMENT