ಜೇಮ್ಸ್ ಚಿತ್ರದ ಸುವರ್ಣ ವರ್ಲ್ಡ್ ಪ್ರಿಮಿಯರ್ ಗೆ ಸ್ಟಾರ್ ಸುವರ್ಣ ವಾಹಿನಿ ಮಕ್ಕಳಿಗಾಗಿಯೇ ವಿಶೇಷ ಅಭಿಯಾನವನ್ನ ಆಯೋಜಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಮಕ್ಕಳೆಂದ್ರೆ ತುಂಬಾ ಇಷ್ಟ. ಮಕ್ಕಳಿಗೂ ಅಪ್ಪು ಅಂದ್ರೆ ಅಷ್ಟೇ ಇಷ್ಟ.
ಹಾಗಾಗಿ ವಾಹಿನಿ ಜೇಮ್ಸ್ ಪ್ರಪ್ರಥಮಬಾರಿಗೆ ಪ್ರಸಾರವಾಗ್ತಿರೋ ಈ ವೇಳೆಯಲ್ಲಿ ಇಂತಹ ವಿಶಿಷ್ಠ ಅಭಿಯಾನವನ್ನ ಹಮ್ಮಿಕೊಂಡಿದೆ. ಅದ್ರಂತೆ, ರಾಜ್ಯದಾದ್ಯಂತ ಸುಮಾರು 40 ಸಾವಿರ ಶಾಲಾ ಮಕ್ಕಳಿಂದ ಪುನೀತ್ ರಾಜ್ ಕುಮಾರ್ ರವರ ರೇಖಾಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯನ್ನ ನಡೆಸಿದೆ.
ಈಗಾಗಲೇ, ರಾಜ್ಯದ ವಿವಿಧ ಶಾಲೆಗಳಲ್ಲಿ ಮಕ್ಕಳು ರಾಜಕುಮಾರ ಪುನೀತ್ ರ ಭಾವ ಚಿತ್ರಕ್ಕೆ ಬಣ್ಣ ತುಂಬಿ ಸಂಭ್ರಮಿಸಿದ್ದಾರೆ. ಅತ್ಯುತ್ತಮವಾಗಿ ಬಣ್ಣತುಂಬಿಸಿದ ಮಕ್ಕಳಿಗೆ ಸುವರ್ಣ ವಾಹಿನಿಯವತಿಯಿಂದ ಪ್ರಶಂಸಾ ಪತ್ರವನ್ನ ನೀಡಲಾಗಿತ್ತಿದೆ. ಈ ವಿಶೇಷ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ, ರಾಜ್ಯಾದಾದ್ಯಂತ ಎಲ್ಲಾ ಮಾದರಿಯ ಶಾಲಾ ಮಕ್ಕಳಿಂದ ರಾಜಕುಮಾರ ಪುನೀತ್ ರಾಜ್ ಕುಮಾರ್ ರವರ ರೇಖಾ ಚಿತ್ರಕ್ಕೆ ಬಣ್ಣ ತುಂಬಿ ನಮನ ಸಲ್ಲಿಸ್ತಿದೆ.