ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (PFI) ಕೇರಳದ ಐವರು ಆರ್ಎಸ್ಎಸ್ (RSS) ನಾಯಕರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರಿಗೆ Y ವರ್ಗದ ಭದ್ರತೆಯನ್ನು ನೀಡಿದೆ.
ಇತ್ತೀಚೆಗೆ ಪಿಎಫ್ಐ ಕಾರ್ಯಕರ್ತರ ಮನೆ, ಕಚೇರಿ ಮೇಲೆ ಎನ್ಐಎ (NIA) ನಡೆಸಿತ್ತು. ಈ ಸಮಯದಲ್ಲಿ ಕೇರಳದ ಪಿಎಫ್ಐ ಸದಸ್ಯ ಮೊಹಮ್ಮದ್ ಬಶೀರ್ ಮನೆ ಮೇಲೂ ದಾಳಿ ನಡೆಸಿತ್ತು. ಈ ವೇಳೆ ಬಶೀರ್ ಮನೆಯಿಂದ ಐವರು ಆರ್ಎಸ್ಎಸ್ ನಾಯಕರ ಹೆಸರುಗಳ ಪಟ್ಟಿಯು ಪಿಎಫ್ಐ ರಾಡಾರ್ನಲ್ಲಿ ಪತ್ತೆ ಆಗಿತ್ತು.
ಈ ಹಿನ್ನೆಲೆಯಲ್ಲಿ ಕೇರಳದ ಆರ್ಎಸ್ಎಸ್ ನಾಯಕರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್)ಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಶನಿವಾರ ಐವರು ಆರ್ಎಸ್ಎಸ್ ನಾಯಕರಿಗೆ ಭದ್ರತೆಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.
ಇದನ್ನೂ ಓದಿ : ಪಿಎಫ್ಐ ಮುಖಂಡ ಸುಬೇದ್ ಹತ್ಯೆ ಪ್ರಕರಣ : 3 ಜನ ಆರ್ಎಸ್ಎಸ್ ಕಾರ್ಯಕರ್ತರ ಬಂಧನ
ಎನ್ಐಎ, ಇಂಟೆಲಿಜೆನ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಕೇರಳದ ಐದು ಆರ್ಎಸ್ಎಸ್ ನಾಯಕರಿಗೆ ವೈ ವರ್ಗದ ಭದ್ರತೆಯನ್ನು ನೀಡಲಾಗುವುದು. ಆರ್ಎಸ್ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದೆ.
Centre accords Y category security cover to five RSS leaders in Kerala in view of possible threats to them: Official sources
— Press Trust of India (@PTI_News) October 1, 2022
ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ನಿಷೇಧ ಮಾಡಿ ಗೃಹ ಸಚಿವಾಲಯ ಗುರುವಾರ ಆದೇಶ ಪ್ರಕಟಿಸಿತ್ತು.
ಇದನ್ನೂ ಓದಿ : PFI ಬ್ಯಾನ್ ಸ್ವಾಗತಾರ್ಹ : ಪಸ್ಮಂಡಾ ಮುಸ್ಲಿಂ ಮಂಡಳಿ