ಸದಾ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ದವಾಗಿರುವ ನಟಿ ಸ್ವರ ಭಾಸ್ಕರ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಸಾವರ್ಕರ್ ಅಭಿಮಾನಿಗಳು ಈ ಪತ್ರ ಬರೆದಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮುಂಬೈನ ವರ್ಸೋವಾ ದಲ್ಲಿನ ನಟಿಯ ಮನೆಗೆ ಬೆದರಿಕೆ ಪತ್ರ ಬಂದಿದೆ. ಬೆದರಿಕೆ ಪತ್ರ ಪಡೆದುಕೊಂಡಿದ್ದ ನಟಿ ವರ್ಸೋವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ 2 ದಿನದ ಹಿಂದೆಯೇ ಪ್ರಕರಣ ದಾಖಲಿಸಿದ್ದಾರೆ.
ಸ್ವರ ಭಾಸ್ಕರ್ ಅವರ ದೂರು ಆಧರಿಸಿ ಅಪರಿಚಿತ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಬೆದರಿಕೆ ಪತ್ರವನ್ನು ಹಿಂದಿಯಲ್ಲಿ ಬರೆಯಲಾಗಿದೆ. ಇದರಲ್ಲಿ, ವೀರ್ ಸಾವರ್ಕರ್ ಅವರನ್ನು ಅವಮಾನಿಸಿದರೆ ಈ ದೇಶದ ಯುವಕರು ಸಹಿಸಿಕೊಳ್ಳುವುದಿಲ್ಲ ಎಂದು ಬರೆಯಲಾಗಿದೆ.
ನಟಿ ಸ್ವರಾ ಭಾಸ್ಕರ್ ಅವರು ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. 2017 ರಲ್ಲಿ ಟ್ವೀಟ್ ಮಾಡಿದ್ದ ಅವರು ಸಾವರ್ಕರ್ ನಿಜವಾಗಲೂ ವೀರನೇ ಎಂದು ಪ್ರಶ್ನಿಸಿದ್ದರು. ಅಪ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಾಗ ಈ ಘಟನೆಯನ್ನು ಹಿಂದುತ್ವಕ್ಕೆ ಹೋಲಿಕೆ ಮಾಡಿದ್ದರು. ಅನಂತರದಲ್ಲಿಯೂ ಸ್ವರಾ ಭಾಸ್ಕರ್ ಹಲವಾರಿ ವಿವಾದಾತ್ಮಕ ಕಾಮೆಂಟ್ ಮಾಡುತ್ತಾ ಸುದ್ದಿಯಲ್ಲಿದ್ದಾರೆ.