ADVERTISEMENT
ಕೆಎಂಎಫ್ನಲ್ಲಿ (KMF) ನೌಕರಿ ಕೊಡಿಸುವುದಾಗಿ ನಂಬಿಸಿದ ವಂಚಿಸಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು (Mangaluru) ಮೂವರನ್ನು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಮೇಶ್ ಪೂಜಾರಿ ಬಿ, ಪಡೀಲ್ ಬಳಿಯ ಅಲಪೆಯ 36 ವರ್ಷದ ಚಂದ್ರಾವತಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಸುರೇಂದ್ರ ರೆಡ್ಡಿ ಬಂಧಿತರು.
138 ಮಂದಿ ನೌಕರಿ ಆಕಾಂಕ್ಷಿಗಳಿಗೆ ಮಂಗಳೂರಲ್ಲಿರುವ ಕೆಎಂಎಫ್ ಡೈರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದರು.
ಈ ಸಂಬಂಧ ಆಗಸ್ಟ್ 18ರಂದು ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರನ್ನು ಕೋರ್ಟ್ಗೆ ಹಾಜುರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ADVERTISEMENT