ಬೈಕ್ ಓಡಿಸುತ್ತಾ ಹೆಲ್ಮೇಟ್ ಹಾಕದೇ ರೀಲ್ಸ್ ಮಾಡಿದ್ದ ಟಿಕ್ಟಾಕ್ ಸ್ಟಾರ್ ಒಬ್ಬರಿಗೆ ಪೊಲೀಸರು 17,500 ದಂಡ ವಿಧಿಸಿದ್ದಾರೆ. ಬೈಕ್ ರೀಲ್ಸ್ ಮತ್ತು ವೀಲಿಂಗ್ ಮಾಡುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಹೆಲ್ಮೇಟ್ ಹಾಕದೇ ಬೈಕ್ ಬಳಸಿ ರೀಲ್ಸ್ ಮಾಡುವವರು ಇನ್ನು ಮುಂದೆ ಎಚ್ಚರವಾಗಿರಬೇಕಿದೆ. ಹೆಲ್ಮೇಟ್ ಹಾಕದೇ ರೀಲ್ಸ್ ಮಾಡಿದ್ದ ಬೆಂಗಳೂರಿನ ಖ್ಯಾತ ಟಿಕ್ ಟಾಕ್ ಸ್ಟಾರ್ ಧನುಗೆ ಸಂಚಾರಿ ಪೊಲೀಸರು ಬರೋಬ್ಬರಿ 17,500 ರೂ. ದಂಡ ವಿಧಿಸಿದ್ದಾರೆ.
ಟಿಕ್ಟಾಕ್ ಸ್ಟಾರ್ ಧನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋಗಳ ಆಧಾರಗಳ ಮೇಲೆ ಹೆಲ್ಮೆಟ್ ಹಾಕದೇ ಇರುವುದನ್ನು ಗಮನಿಸಿ ದಂಡ ವಿಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.
ಸಂಚಾರಿ ಪೊಲೀಸರ ಸೋಶಿಯಲ್ ಮೀಡಿಯಾ ಸೆಲ್ ಇನ್ಸ್ಟಾಗ್ರಾಮ್ನಲ್ಲಿ ಮಾನಿಟರಿಂಗ್ ಮಾಡುತ್ತಿದ್ದು, ಕಳೆದ ವರ್ಷ ಸೋಶಿಯಲ್ ಮೀಡಿಯಾ ನೋಡಿ ಒಟ್ಟು 44 ಕೇಸ್ ದಾಖಲಾಗಿದ್ದವು. ಕಳೆದ ವಾರದಲ್ಲಿ 40 ವೀಲಿಂಗ್ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.