ತೀರ್ಥಹಳ್ಳಿ ಮುಖ್ಯ ಬಸ್ ಸ್ಟಾಂಡ್ ನಲ್ಲಿ ಕಳೆದ 10 ದಿನಗಳ ಹಿಂದೆ ನೂತನ ಡಾಂಬರೀಕರಣ ಕಾಮಗಾರಿ ನಡೆಸಲಾಗಿತ್ತು. ಆದರೆ, ಕೇವಲ 10 ದಿನಗಳಲ್ಲಿಯೇ ಈ ಡಾಂಬರೀಕರಣ ಕಾಮಗಾರಿ ಕಿತ್ತುಬಿದ್ದಿದೆ. ಇಷ್ಟೊಂದು ದೊಡ್ಡ ಮಟ್ಟದ ಕಳಪೆ ಕಾಮಗಾರಿಗೆ ತೀರ್ಥಹಳ್ಳಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಶಾಸಕರು, ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ಕಳೆದೆರಡು ವರ್ಷಗಳಿಂದ ತೀರ್ಥಹಳ್ಳಿ ಕ್ಷೇತ್ರಕ್ಕೆ ಭಾರಿ ಪ್ರಮಾಣದ ಅಭಿವೃದ್ಧಿಗಾಗಿ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಅದರಲ್ಲಿ ರಸ್ತೆ ಕಾಮಗಾರಿಗಳು ಅತಿ ಮುಖ್ಯವಾಗಿದೆ. ಕ್ಷೇತ್ರದ ಶಾಸಕರು ಆರಗ ಜ್ಞಾನೇಂದ್ರರವರು ಪ್ರತಿ ಸಭೆಯಲ್ಲೂ ಅಭಿವೃದ್ಧಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಅವರ ಸುತ್ತ ಸುತ್ತುತ್ತಿರುವ ಗುತ್ತಿಗೆದಾರರಿಂದಲೇ ಕಳಪೆ ಕಾಮಗಾರಿಗಳು ನಡೆಯುತ್ತಿವೆ.
ತೀರ್ಥಹಳ್ಳಿ ಮುಖ್ಯ ಬಸ್ ಸ್ಟ್ಯಾಂಡ್ ಮತ್ತು ದೊಡ್ಡಮನೆ ಕೇರಿ ಹಾಕಿರುವ ರಸ್ತೆ ಡಾಂಬರೀಕರಣ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ರಸ್ತೆ, ಕುರುವಳ್ಳಿ ಇಂದ ಹುಣಸವಳ್ಳಿಗೆ ಹೋಗುವ ವಿಠಲನಗರ ರಸ್ತೆ ಮುಂತಾದ ಕಾಮಗಾರಿಗಳು ಕಳಪೆಯಾಗಿ ನಿರ್ಮಾಣಗೊಂಡಿವೆ. ಈ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ. ಗೃಹ ಸಚಿವರು ಒಮ್ಮೆ ಈ ಕಾಮಗಾರಿಗಳನ್ನು ನೋಡಿಕೊಂಡು ಬರಬೇಕು.
ತೀರ್ಥಹಳ್ಳಿ ಮುಖ್ಯ ಬಸ್ಟಾಂಡ್ ಕಾಮಗಾರಿ ಮಾಡುವ ದಿನ ಸುದ್ದಿ ಪ್ರಸಾರವಾಗಿತು. ಆ ಮೂಲಕ ಅಧಿಕಾರಿಗಳಿಗೆ ತಿಳಿವಳಿಕೆಯೊಂದನ್ನು ನೀಡಲಾಗಿತ್ತು. ಕಳಪೆ ಕಾಮಗಾರಿಯಾಗುತ್ತಿದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳು ಬಂದು ಸ್ಥಳದಲ್ಲಿ ನಿಲ್ಲಲಿ ಎಂದು. ಅಂದು ಮಧ್ಯಾಹ್ನ ಟಾರ್ ಹಾಕುವಾಗ ಪಟ್ಟಣ ಪಂಚಾಯ್ತಿಮುಖ್ಯಾಧಿಕಾರಿ, ಎಂಜಿನಿಯರ್ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು ಕೆಲವು ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು ಆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು.
ದೊಡ್ಡಮನಿ ಕೇರಿಯಲ್ಲೂ ಸಹ ರಸ್ತೆ ಮಾಡುವಾಗ ಅಧಿಕಾರಿಗಳು ಬಂದು ನಿಂತು ಫೋಟೋ ತೆಗೆಸಿಕೊಂಡುಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಟಾರ್ ಹಾಕಿ ಕೇವಲ ಹತ್ತು – ಹದಿನೈದು ದಿನ ಆಗಿದೆ ಮುಖ್ಯ ಬಸ್ಟಾಂಡ್ ರಸ್ತೆಯಲ್ಲಿ ಮತ್ತು ದೊಡ್ಡಮನೆ ಕೇರಿ ರಸ್ತೆಯಲ್ಲಿ ಹಾಕಿರುವ ಟಾರ್ ಗಳು ಕಿತ್ತು ಹೋಗಿ, ಹೊಂಡಗಳು ಬಿದ್ದಿವೆ. ಜನರು ತಿರುಗಾಡುವ, ವಾಹನಗಳು ಸಂಚರಿಸುವ ಸ್ಥಿತಿಯಲ್ಲಿಲ್ಲ. ಲಕ್ಷಾಂತರ ರೂಪಾಯಿಗಳು ವೆಚ್ಚ ಮಾಡಿ ರಸ್ತೆ ಅಭಿವೃದ್ಧಿಪಡಿಸಿ ಹಾಕಿರುವಂಥ ಟಾರು ಕೇವಲ ಹತ್ತು- ಹದಿನೈದು ಕಿತ್ತು ಹೋಗಿದೆಯೆಂದರೆ ಗುತ್ತಿಗೆದಾರನ ಕಳಪೆ ಕಾಮಗಾರಿ ಇಂಜಿನಿಯರ್ ಮತ್ತು ಪಟ್ಟಣ ಪಂಚಾಯಿತಿ ಆಡಳಿತ ವರ್ಗದ ಭ್ರಷ್ಟಾಚಾರದ ಮುಖವಾಡ ಬಸ್ಟಾಂಡ್ ಆವರಣದಲ್ಲಿ ಕಳಚಿ ಬಿದ್ದಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ಸವಲತ್ತುಗಳನ್ನು ಈ ರೀತಿ ಕಳಪೆ ಕಾಮಗಾರಿ ಮಾಡಿಸಿ ಭ್ರಷ್ಟಾಚಾರಕ್ಕೆ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ರ ಬಗ್ಗೆ ಕಠಿಣ ಕ್ರಮ ಆಗಲೇಬೇಕು. ತೀರ್ಥಹಳ್ಳಿಯ ಸುಸಂಸ್ಕೃತ, ವಿದ್ಯಾವಂತ ಜನತೆ ಅದರಲ್ಲೂ ರಾಜ್ಯ ಕಂಡ ಅಪರೂಪದಲ್ಲಿ ಅಪರೂಪದ ರಾಜಕಾರಣಿಮಾಜಿ ಮುಖ್ಯಮಂತ್ರಿ ದಿವಂಗತ ಕಡಿದಾಳ್ ಮಂಜಪ್ಪ. ರಾಷ್ಟ್ರ ಕಂಡ ವಿಶೇಷ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಊರಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಅಕ್ರಮ, ಭ್ರಷ್ಟಾಚಾರಗಳ ದಿನನಿತ್ಯ ನಡೆಯತೊಡಗಿದೆ.
ಕಳಪೆ ಕಾಮಗಾರಿಯ ಗುತ್ತಿಗೆದಾರ ಮತ್ತು ಆತನು ನೀಡುವ ಎಂಜಲು ಕಾಸಿಗೆ ಕೈ ಒಡ್ಡಿ ಕೊಂಡಿರುವ ಭ್ರಷ್ಟ ಇಂಜಿನಿಯರ್ ಅಧಿಕಾರಿಗಳ ಮುಖವಾಡವನ್ನು ಬಯಲಿಗೆ ಬರಬೇಕಿದೆ. ಅವರಿಗೆ ಶಿಕ್ಷೆ ಆಗಬೇಕಿದೆ. ಶಿವಮೊಗ್ಗದ ದಕ್ಷ ಜಿಲ್ಲಾಧಿಕಾರಿ ಡಾಕ್ಟರ್॥ ಸೆಲ್ವಮಣಿ ಅವರು ತೀರ್ಥಹಳ್ಳಿಯ ಮುಖ್ಯ ಬಸ್ ಸ್ಟ್ಯಾಂಡ್ ಮತ್ತು ದೊಡ್ಡಮನೆ ಕೇರಿಯಲ್ಲಿ ಹಾಕಿರುವ ಟಾರನ್ನು ಪರಿಶೀಲನೆ ಮಾಡಿ ತನಿಖೆಗೆ ಒಳಪಡಿಸಿ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ ಗೆ ಹಾಕಿ ಭ್ರಷ್ಟ ಇಂಜಿನಿಯರ್, ತಕ್ಷಣ ಸಸ್ಪೆಂಡ್ ಮಾಡಲಿ ಎಂಬುದು ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕರ ಮತ್ತು ತೆರಿಗೆದಾರರ ಒತ್ತಾಯವಾಗಿದೆ.
ಲೇಖನ :- ಲಿಯೋ ಅರೋಜ (9448137473)