ತಿರುಪತಿ ತಿರುಮಲದಿಂದ ನಾಲ್ಕು ದಿನಗಳ ಹಿಂದೆ ಕಿಡ್ನಾಪ್ ಆಗಿದ್ದ ನಾಲ್ಕು ವರ್ಷದ ಬಾಲಕ ಗೋವರ್ಧನ್ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ.
ಬಾಲಕನನ್ನು ಅಪಹರಿಸಿದ್ದ ಮೈಸೂರಿನ ಪವಿತ್ರ ಸೀದಾ ಮೈಸೂರು ಬಸ್ ಹತ್ತಿದ್ದರು. ಪೊಲೀಸರು ಸಹ ಯಾವುದೇ ಸುಳಿವು ಸಿಗದೇ ತೀವ್ರ ಶೋಧ ನಡೆಸಿದ್ದರು. CCTV ದೃಶ್ಯಗಳ ಆಧಾರದ ಮೇಲೆ ಬಾಲಕನನ್ನು ಅಪಹರಿಸಿದ್ದು ಓರ್ವ ಮಹಿಳೆ ಎಂದು ಗೊತ್ತಾಗಿತ್ತು.

ಆದರೆ, ಇಂದು ಬೆಳಗ್ಗೆ ಮೈಸೂರಿನ ಪವಿತ್ರ ಲ್, ಅಪಹರಣಗೊಂಡಿದ್ದ ಬಾಲಕನ ಜೊತೆ ಪವಿತ್ರ ತಂದೆ ತಾಯಿ ತಿರುಮಲದಲ್ಲಿ ಕಾಣಿಸಿಕೊಂಡರು. ಬಾಲಕನನ್ನು ಸುರಕ್ಷಿತವಾಗಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಒಪ್ಪಿಸಿದರು. ತಮ್ಮ ಮಗಳ ಮಾನಸಿಕ ಸ್ಥಿತಿ ಸರಿಯಿಲ್ಲ. ಹೀಗಾಗಿಯೇ ಮಗುವನ್ನು ಮೈಸೂರಿಗೆ ಕರೆತಂದಿದ್ದರು. ದೇವರ ದರ್ಶನಕ್ಕಾಗಿ ತಿರುಪತಿಗೆ ಬಂದಿದ್ದ ಪವಿತ್ರ ವಾಪಸ್ ಮನೆಗೆ ಮಗುವನ್ನು ಕರೆ ತಂದಿದ್ದು ನೋಡಿ ಶಾಕ್ ಆಯಿತು. ಕೂಡಲೇ ಮಗುವನ್ನು ಪೋಷಕರಿಗೆ ಒಪ್ಪಿಸಲು ತಿರುಮಲಕ್ಕೆ ಬಂದೆವು ಎಂದು ಪವಿತ್ರ ಪೋಷಕರು ವಿವರ ನೀಡಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿ ಪವಿತ್ರಾರನ್ನು ಕಳಿಸಿಕೊಟ್ಟಿದ್ದಾರೆ.

ನಾಲ್ಕು ವರ್ಷದ ಮಗ ಗೋವರ್ಧನ್ ಮತ್ತೆ ಮಡಿಲು ಸೇರಿದ್ದರಿಂದ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಆನಂದ ಭಾಷ್ಪ ಸುರಿಸಿದ್ದಾರೆ.