ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹದಿಂದ ಆಗಲಿರುವ ಹೊರೆಯನ್ನು ರಾಜ್ಯ ಸರ್ಕಾರ ಈಗ ನೇರವಾಗಿ ಪ್ರಯಾಣಿಕರ ಮೇಲೆ ವರ್ಗಾಯಿಸಿದೆ.
ಬೆಂಗಳೂರು-ಮೈಸೂರು ನಡುವಿನ ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ ದರ ಹೆಚ್ಚಳವಾಗಿದೆ.
ಕರ್ನಾಟಕ ಸಾಮಾನ್ಯ ಸಾರಿಗೆ ಬಸ್ನಲ್ಲಿ ಪ್ರಯಾಣದ ಟಿಕೆಟ್ ದರ 15 ರೂಪಾಯಿ ಹೆಚ್ಚಳವಾಗಿದೆ. ರಾಜಹಂಸ ಟಿಕೆಟ್ ದರ 20 ರೂಪಾಯಿ ಮತ್ತು ಮಲ್ಟಿ ಎಕ್ಸೆಲ್ ವಾಹನಗಳ ಟಿಕೆಟ್ ದರ 25 ರೂಪಾಯಿ ಹೆಚ್ಚಳವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್ಪ್ರೆಸ್ವೇನಲ್ಲಿ ಟೋಲ್ ಸಂಗ್ರಹ ಆರಂಭಿಸಿರುವ ಕಾರಣ ಹೊರೆ ನಿಭಾಯಿಸಲು ಟಿಕೆಟ್ ದರ ಹೆಚ್ಚಳ ಮಾಡಿದ್ದಾಗಿಯೂ, ಎಲ್ಲ ಟೋಲ್ ಪ್ಲಾಜಾಗಳಲ್ಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ ಎಂದೂ ಕೆಎಸ್ಆರ್ಟಿಸಿ ಹೇಳಿದೆ.
ADVERTISEMENT
ADVERTISEMENT