ಒಂದು ತಿಂಗಳ ನಂತರ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬರುತ್ತಿದೆ.
ಇಂದು ಬುಧವಾರ ಒಂದೇ ದಿನದಲ್ಲಿ 10 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1050 ರೂ.ಗಳಷ್ಟು ಇಳಿಕೆಯಾಗಿದೆ. 10 ಗ್ರಾಂ. 22 ಕ್ಯಾರೆಟ್ ಚಿನ್ನದ ಬೆಲೆ 960 ರೂಪಾಯಿಗಳಷ್ಟು ಕಡಿಮೆಯಾಗಿದೆ.
ಆ ಮೂಲಕ 48,360 ರೂ.ಗಳಷ್ಟು ಬೆಲೆ ಇದ್ದ 22 ಕ್ಯಾರೆಟ್ ಚಿನ್ನ 47,400 ರೂ.ಗಳಿಗೆ ಇಳಿಕೆಯಾಗಿದೆ. 52,760 ರೂ.ಗಳಷ್ಟು ಇದ್ದ 24 ಕ್ಯಾರೆಟ್ ಚಿನ್ನ 51,710 ರೂ.ಗಳಿಗೆ ಇಳಿಕೆಯಾಗಿದೆ.
ಆರ್ಥಿಕ ಹಿಂಜರಿತದ ಭಯದಿಂದ ಅಮೇರಿಕಾ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿದ ಬೆನ್ನಲ್ಲೇ ಒಂದು ತಿಂಗಳ ಕನಿಷ್ಟ ಮಟ್ಟಕ್ಕೆ ಚಿನ್ನದ ಬೆಲೆ ಇಳಿಕೆಯಾಗಿದೆ.
ಬುಧವಾರ (ಜೂನ್ 15) ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ :
ಚೆನ್ನೈ : 47,550
ಮುಂಬೈ : 47,400
ದೆಹಲಿ : 47,400
ಕೋಲ್ಕತ್ತಾ : 47,400
ಬೆಂಗಳೂರು : 47,400
ಪಾಟ್ನಾ : 47,580