ಟೋಲ್ ಕಟ್ಟುವಂತೆ ಹೇಳಿದ ಟೋಲ್ನ (Toll Booth) ಮಹಿಳಾ ಸಿಬ್ಬಂದಿ ಮೇಲೆ ವಾಹನ ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ.
ಹಲ್ಲೆಯ ವೀಡಿಯೋ ಟೋಲ್ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮಧ್ಯಪ್ರದೇಶ ರಾಜ್ಯದ (Madyapradesh) ರಾಜ್ಘರ್ (Rajgarh) ಜಿಲ್ಲೆಯ ರಾಜ್ಘರ್-ಭೋಪಾಲ್ (Bhopal) ಹೆದ್ದಾರಿಯಲ್ಲಿ ಬರುವ ಕಚ್ನಾರಿಯಾ ಟೋಲ್ನಲ್ಲಿ ನಡೆದಿದೆ.
ಟೋಲ್ ಕಟ್ಟುವಂತೆ ಮತ್ತು ಟೋಲ್ ಕಟ್ಟದೇ ಹೋಗಲು ಬಿಡಲ್ಲ ಎಂದು ಆ ಮಹಿಳಾ ಸಿಬ್ಬಂದಿ ಹೇಳಿದ್ದಾರೆ.
ಮೊದಲಿಗೆ ಆ ವಾಹನ ಮಾಲೀಕ ಟೋಲ್ನ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಗೆ ಪ್ರತಿದಾಳಿಯಾಗಿ ಆಕೆ ತನ್ನ ಚಪ್ಪಲಿಯಿಂದ ಆತನಿಗೆ ತಿರುಗಿ ಬಾರಿಸಿದ್ದಾಳೆ.
#woman slapped, abused allegedly for asking a man to pay toll taxes in #MadhyaPradesh Rajgarh district.
Sources say that the accused is related to a politician. @TheQuint @QuintHindi pic.twitter.com/JzB5k59D8g
— Vishnukant (@vishnukant_7) August 21, 2022