ಪ್ರತಿ ಕೆಜಿಗೆ 40ರೂಪಾಯಿಂದ 80 ರೂಪಾಯಿಗೆ ಜಿಗಿದ ಟೊಮ್ಯಾಟೋ ರೇಟು ಇದೀಗ ಮತ್ತೆ ಗಗನ ಮುಖಿಯಾಗುವ ಲಕ್ಷಣ ಗೋಚರವಾಗ್ತಿದೆ.
ಮಿತಿಮೀರಿದ ತಾಪಮಾನ ಹಾಗೂ ಚುರುಕಾಗುತ್ತಿರುವ ಮುಂಗಾರಿನ ಪ್ರಭಾವದಿಂದಾಗಿ ಟೋಮ್ಯಾಟೋಗೆ ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಹೀಗಾಗಿ ಟೊಮ್ಯಾಟೋ ಬೆಳೆದ ರೈತರಿಗೆ ಇದು ಖುಷಿ ತಂದರೆ, ಪ್ರತಿದಿನ ಬಳಸಲೇಬೇಕಾದ ಈ ತರಕಾರಿಯ ಬೆಲೆ ಕೇಳಿ ಗ್ರಾಹಕರು ಶಾಕ್ ಆಗ್ತಿದ್ದಾರೆ.
ಏಷಿಯಾದ 2ನೇ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆ ಕೋಲಾರದ ಎಪಿಎಂಸಿಯಲ್ಲಿ ಪ್ರತಿ ಕೆ.ಜಿ ಟೊಮ್ಯಾಟೋ 60 ರೂಪಾಯಿ ಇದೆ. 15 ರೂಪಾಯಿ ಇದ್ದ ಪ್ರತಿ ಕೆಜಿ ಇದೀಗ ದಿಢೀರನೆ 60 ಕೆಜಿ ತಲುಪಿದೆ. ಎಪಿಎಂಸಿಯಲ್ಲಿ ಕಳೆದ ವಾರ 250 ರೂಪಾಯಿ ಇದ್ದ ಪ್ರತಿ ಬಾಕ್ಸ್ ಟೊಮ್ಯಾಟೋ ಇದೀಗ 900ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಟೊಮ್ಯೋಟೋ ಪ್ರಮಾಣ ಕುಸಿತವಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಟೋಮ್ಯಾಟೋ ಬೆಲೆ ಏರಿಕೆ ಕಾಣುತ್ತಿದೆ.
ಕಳೆದ ವರ್ಷ ಕೂಡ ಇದೇ ಸ್ಥಿತಿ ಎದುರಾಗಿದ್ದ ಪರಿಣಾಮವಾಗಿ ಪ್ರತಿ ಕೆ.ಜಿ ಟೊಮ್ಯಾಟೋ 200 ರೂಪಾಯಿ ತಲುಪಿತ್ತು.
ಇನ್ನು ಕೋಲಾರ ಸೇರಿದಂತೆ ವಿವಿಧ ಭಾಗಗಳಿಂದ ರಫ್ತಾಗುತ್ತಿರುವ ಟೊಮ್ಯಾಟೋ ಪ್ರಮಾಣ ಕೂಡ ತಗ್ಗಿದೆ. ಬೆಂಗಳೂರು, ಮೈಸರು, ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಟೊಮ್ಯಾಟೋ ಬೆಲೆ ಏರಿಕೆ ಕಂಡಿದೆ.
ಮುಂಗಾರು ಇನ್ನಷ್ಟು ಚುರುಕುಗೊಂಡಲ್ಲಿ ಇದೀಗ ಪ್ರತಿ ಕೆಜಿಗೆ 80 ರೂಪಾಯಿ ಇರುವ ಟೊಮ್ಯಾಟೋ 100 ರೂಪಾಯಿ ದಾಟಿದರೂ ಕೂಡ ಅಚ್ಚರಿಯೇನಿಲ್ಲ.
ADVERTISEMENT
ADVERTISEMENT