ಹೆಲ್ತ್ ಟಿಪ್ಸ್ : ಟೊಮೆಟೊ ಎಲ್ಲರ ಮನೆಯಲ್ಲೂ ಸಿಗುವಂತಹ ತರಕಾರಿ. ಇದನ್ನ ಅತಿ ಹೆಚ್ಚು ಅಡುಗೆಗೆ ಬಳಸುತ್ತಾರೆ.
ಇದನ್ನು ಮುಖದ ಕಾಂತಿಗಾಗಿ ಬಳಸುವುದನ್ನು ನೋಡಿದ್ದೇವೆ. ಆದ್ರೆ ಬೆಳಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಟೊಮೊಟೊ ಜ್ಯೂಸ್ ಕುಡಿಯುವುದರಿಂದ ಲಾಭಗಳೇನು ಪ್ರತಿಯಿಬ್ಬರು ತಿಳಿದುಕೊಂಡರೆ . ಕೂಡಲೇ ಜ್ಯೂಸ್ ಕುಡಿಯಲು ಶುರು ಮಾಡುತ್ತೀರಾ? ಹಾಗಾದ್ರೆ ಅದರಿಂದ ಏನು ಲಾಭ ತಿಳಿಯೊಣ
ಟೊಮೊಟೊದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ 6, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್, ರಂಜಕ, ತಾಮ್ರ, ಫೈಬರ್, ಲೈಕೋಪೀನ್ ಮತ್ತು ಇತರ ಉತ್ಕರ್ಷಣ ನಿರೋಧಕಗಳಿವೆ. ಜೀಣಕ್ರಿಯೆ ಕೂಡ ಸುಧಾರಿಸುತ್ತದೆ.
ಅಂದಹಾಗೆ ಇದರಲ್ಲಿ ಫೈಬರ್ ಅಂಶವನ್ನು ಕೂಡಿರುತ್ತದೆ. ಕರುಳಿನ ಸಮಸ್ಯೆ ಇದ್ದರೆ ಅದು ಕೂಡ ಸುಧಾರಿಸುವಂತೆ ಮಾಡಿದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಟೊಮೆಟೊ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
ಈ ಟೊಮೆಟೊ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ನಿಯಮಿತವಾಗಿ ಟೊಮೆಟೊ ರಸವನ್ನು ಕುಡಿಯುವುದರಿಂದ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುತ್ತದೆ. ಕಲೆಗಳು ಮತ್ತು ಮೊಡವೆಗಳು ಕಡಿಮೆಯಾಗುತ್ತವೆ.