ಮೊಬೈಲ್ ಕಳೆದುಕೊಂಡದಲ್ಲಿ ಅದನ್ನು ಕಂಡುಹಿಡಿಯಲು ಫೈಂಡ್ ಮೈ ಡಿವೈಸ್ ಸಹ ಅನೇಕ ಆಪ್ಸ್ ಲಭ್ಯ ಇವೆ.
ಆ ಆಪ್ಸ್ ಬಳಸದೇ ಇರುವವರಿಗಾಗಿ ಕೇಂದ್ರ ಸರ್ಕಾರ ಇತ್ತೀಚಿಗೆ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಹೆಸರಿನಲ್ಲಿ ಹೊಸ ಸೇವೆಗಳನ್ನು ಇತ್ತೀಚಿಗೆ ಆರಂಭಿಸಿದೆ.
ಸಮಾಚಾರ ಮತ್ತು ಮಾಹಿತಿ ಸಚಿವಾಲಯ www.ceir.gov.in ವೆಬ್ಸೈಟ್ ಶುರುಮಾಡಿದೆ.
* ಮೊಬೈಲ್ ಕಳೆದುಕೊಂಡವರು ಈ ವೆಬ್ಸೈಟ್ಗೆ ತೆರಳಿ ಬ್ಲಾಕ್ ಸ್ಟೋಲೆನ್/ಲಾಸ್ಟ್ ಮೊಬೈಲ್ ಆಪ್ಶನ್ ಆಯ್ಕೆ ಮಾಡಿಕೊಳ್ಳಬೇಕು.
* ಮೊಬೈಲ್ ನಂಬರ್ ಐಎಂಇಐ ನಂಬರ್, ಮೊಬೈಲ್ ಬ್ರಾಂಡ್ ವಿವರಗಳು, ಫೋನ್ ಕಳೆದುಕೊಂಡ ಸ್ಥಳದ ವಿವರಗಳು, ಪೊಲೀಸರಿಗೆ ನೀಡಿದ ದೂರಿನ ನಂಬರ್, ವೈಯಕ್ತಿಕ ವಿವರಗಳನ್ನು ನಿಗದಿತ ಸ್ಥಳದಲ್ಲಿ ಭರ್ತಿ ಮಾಡಬೇಕು.
* ನಿಮ್ಮ ಬಳಿ ಇರುವ ಮತ್ತೊಂದು ಮೊಬೈಲ್ ನಂಬರ್ ನಮೂದು ಮಾಡಿದಲ್ಲಿ ಓಟಿಪಿ ಬರುತ್ತದೆ.. ಆ ಓಟಿಪಿಯನ್ನು ನಮೂದು ಮಾಡಿ ಸಬ್ಮಿಟ್ ಮಾಡಬೇಕು.
* ನಿಮ್ಮ ಕಳುವಾದ ಮೊಬೈಲ್ನಲ್ಲಿ ನಿಮ್ಮ ಸಿಮ್ ಕಾರ್ಡ್ ತೆಗೆದು ಹೊಸದನ್ನು ಹಾಕಿದಲ್ಲಿ ಅದು ಕೆಲಸ ಮಾಡಲ್ಲ. ಕೂಡಲೇ ಪೊಲೀಸರಿಗೂ ಮಾಹಿತಿ ರವಾನೆ ಆಗುತ್ತದೆ.
* ಮೊಬೈಲ್ ಸಿಕ್ಕ ಕೂಡಲೇ, ಸರ್ಕಾರಿ ಅಧಿಕಾರಿಗಳೇ ನಿಮ್ಮನ್ನು ಸಂಪರ್ಕ ಮಾಡಿ, ಮೊಬೈಲ್ ಅನ್ನು ನಿಮಗೆ ತಲುಪಿಸುತ್ತಾರೆ.