ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿಯಾಗಿದೆ.
ಆಗಸ್ಟ್ 15ರಿಂದ ವಸ್ತ್ರ ಸಂಹಿತೆ ಅನ್ವಯವಾಗಲಿದೆ.
ವಸ್ತ್ರ ಸಂಹಿತೆ ಉಲ್ಲಂಘಿಸುವ ಭಕ್ತಾದಿಗಳಿಗೆ ಗುರುನಿವಾಸ ಅಥವಾ ಅರ್ಧಮಂಟಪದ ಒಳಗೆ ಪ್ರವೇಶ ಇರುವುದಿಲ್ಲ. ಹೊರಗಿನ ಪ್ರಾಕಾರದಿಂದಲೇ ದರ್ಶನ ಪಡೆಯಬೇಕಾಗುತ್ತದೆ.
ಪುರುಷರಿಗೆ ವಸ್ತ್ರ ಸಂಹಿತೆ:
ಧೋತಿ ಮತ್ತು ಶಲ್ಯ ಹಾಗೂ ಉತ್ತರೀಯ.
ಮಹಿಳೆಯರಿಗೆ ವಸ್ತ್ರ ಸಂಹಿತೆ:
ಸೀರೆ-ರವಿಕೆ, ಸಲ್ವಾರ್ ಜೊತೆಗೆ ದುಪ್ಪಟ ಅಥವಾ ಲಂಗ ದಾವಣಿ
ಶಾರದಾಂಬೆಯ ದರ್ಶನಕ್ಕೆ ಬರುವ ಭಕ್ತರು ಭಾರತೀಯ ಉಡುಪುಗಳೊಂದಿಗೆ ದರ್ಶನಕ್ಕೆ ಬರುವಂತೆ ಶೃಂಗೇರಿ ಶಾರದಾ ಪೀಠ ತನ್ನ ಪ್ರಕಟಣೆಯಲ್ಲಿ ಸೂಚಿಸಿದೆ.
ADVERTISEMENT
ADVERTISEMENT