ADVERTISEMENT
ಅಪ್ರಾಪ್ತ ಬಾಲಕನಿಗೆ ಓಡಿಸಲು ಬೈಕ್ ಕೊಟ್ಟ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಳ್ಳಿಗದ್ದೆ ಗ್ರಾಮದ ಪ್ರಮೋದ್ ಎಸ್ ಕೆ ಅವರಿಗೆ ದಂಡ ವಿಧಿಸಲಾಗಿದೆ.
ತೀರ್ಥಹಳ್ಳಿಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಬೈಕ್ ಚಲಾಯಿಸುತ್ತಿದ್ದ 17 ವರ್ಷದ ಬಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದ.
ಆ ಬಾಲಕ ಬಳಿಕ ವಾಹನ ಚಾಲನಾ ಪರವಾನಿಗೆ ಇರಲಿಲ್ಲ ಮತ್ತು ಹೆಲ್ಮೆಟ್ ಕೂಡಾ ಧರಿಸಿರಲಿಲ್ಲ.
ಅಪ್ರಾಪ್ತ ಬಾಲಕನ ಕೈಗೆ ಬೈಕ್ ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಪೊಲೀಸರು ಸಲ್ಲಿಸಿದ ದೋಷಾರೋಪಣೆ ಆಧರಿಸಿ ತೀರ್ಥಹಳ್ಳಿ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ಬೈಕ್ ಮಾಲೀಕ ಪ್ರಮೋದ್ ಅವರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದರು.
ADVERTISEMENT