ಬೆಂಗಳೂರಿನಿಂದ ಇವತ್ತು ಹೊರಡಬೇಕಿದ್ದ ಮತ್ತು ಬೆಂಗಳೂರಿಗೆ ಹೊರಡಬೇಕಿದ್ದ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಕೆಎಸ್ಆರ್ ಬೆಂಗಳೂರಿನಿಂದ -ಜೋಲಾರಪೆಟೈಗೆ ಹೊರಡಬೇಕಿದ್ದ ರೈಲು (16520), ಜೋಲಾರಪೆಟೈನಿಂದ ಬೆಂಗಳೂರಿಗೆ ಹೊರಡಬೇಕಿದ್ದ ರೈಲು (16519) ಮತ್ತು ಕುಪ್ಪನಿಂದ ಬಂಗಾರಪೇಟೆಗೆ ತೆರಳಬೇಕಿದ್ದ ರೈಲು( 06290) ಸಂಚಾರ ರದ್ದಾಗಿದೆ.
ಜೊತೆಗೆ ರೈಲು ದುರಂತ ಸಂಭವಿಸಿರುವ ಒಡಿಶಾದ ಬಹಾನಗರ ರೈಲ್ವೆ ಸ್ಟೇಷನ್ನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೂನ್ 9ರಂದು ಹೌರಾದಿಂದ ಮೈಸೂರಿಗೆ ಹೊರಡಬೇಕಿದ್ದ ರೈಲು (22817) ಸಂಚಾರ ರದ್ದಾಗಿದೆ.
ಅಲ್ಲದೇ ಜೂನ್ 11ರಂದು ಮೈಸೂರಿನಿಂದ ಹೌರಾಗೆ ಹೊರಡಬೇಕಿದ್ದ ರೈಲು (22818) ಸಂಚಾರ ರದ್ದಾಗಿದೆ.
ADVERTISEMENT
ADVERTISEMENT