ADVERTISEMENT
ಟಿಆರ್ಪಿ (TRP) ಹಗರಣದಲ್ಲಿ ಇಂಗ್ಲೀಷ್ ಸುದ್ದಿವಾಹಿನಿ ರಿಪಬ್ಲಿಕ್ ಟಿವಿಗೆ (Republic TV) ಅಕ್ರಮ ಹಣ ವರ್ಗಾವಣೆ (Money Laundering) ಸಂಬಂಧ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ (ED) ಕ್ಲೀನ್ಚಿಟ್ (Clean Chit) ನೀಡಿದೆ.
ಮುಂಬೈನ (Mumbai) ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ (Charegesheet) ಟಿಆರ್ಪಿ ಅಕ್ರಮದಲ್ಲಿ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ (Republic Bharat) ಭಾಗಿ ಆಗಿದೆ ಎನ್ನಲು ಯಾವುದೇ ಪುರಾವೆಗಳು (Evidence) ಸಿಕ್ಕಿಲ್ಲ ಎಂದು ಈಡಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟ ಸರ್ಕಾರ ಇದ್ದ ಅವಧಿಯಲ್ಲಿ ಮುಂಬೈನ ಪೊಲೀಸರು ಟಿಆರ್ಪಿ ಹಗರಣ (TRP Scam)ವನ್ನು ಬಯಲಿಗೆಳೆದಿದ್ದರು.
ಅದರೆ ಉಳಿದೆರಡು ಟಿವಿ ನ್ಯೂಸ್ ಚಾನೆಲ್ಗಳಾದ ಇಂಡಿಯ ಟುಡೇ (India Today) ಮತ್ತು ನ್ಯೂಸ್ ನೇಷನ್ (News Nation) ವಿರುದ್ಧ ತನಿಖೆ ಮುಂದುವರಿದಿದೆ ಎಂದು ಈಡಿ (ED) ಆರೋಪಪಟ್ಟಿಯಲ್ಲಿ ಹೇಳಿದೆ.
ಸೆಪ್ಟೆಂಬರ್ 15ರಂದು ಮುಂಬೈನಲ್ಲಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಕುರಿತ ವಿಶೇಷ ನ್ಯಾಯಾಲಯಕ್ಕೆ (PMLA Court) ಈಡಿ ಆರೋಪಪಟ್ಟಿ ಸಲ್ಲಿಸಿತ್ತು.
ಏನಿದು ಟಿಆರ್ಪಿ ಹಗರಣ..?
– ನವೆಂಬರ್, 2020ರಲ್ಲಿ ಟಿಆರ್ಪಿ ಅಕ್ರಮದಲ್ಲಿ ಹಣ ವರ್ಗಾವಣೆ ಆಗಿದೆ ಎಂಬ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿದ್ದ ಈಡಿ.
– ಅಧಿಕ ಆದಾಯ ಗಳಿಸುವ ಸಲುವಾಗಿ ಟಿಆರ್ಪಿಯನ್ನು ತಿರುಚಿತ್ತು ಮತ್ತು ಅದರಿಂದ ರಿಪಬ್ಲಿಕ್ ಟಿವಿ ಲಾಭ ಪಡೆದಿತ್ತು ಎಂದು ನವೆಂಬರ್, 2020ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದ ಮುಂಬೈ ಪೊಲೀಸರು
– ಆದರೆ ರಿಪಬ್ಲಿಕ್ ಟಿವಿ ಆಗಲೀ ಅಥವಾ ರಿಪಬ್ಲಿಕ್ ಭಾರತ್ ಆಗಲೀ ಟಿಆರ್ಪಿ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎನ್ನುವುದಕ್ಕೆ ಹೇಳಿಕೆಗಳು ಅಥವಾ ಡಿಜಿಟಲ್ ಸಾಕ್ಷ್ಯಗಳು ಇಲ್ಲ ಎಂದಿರುವ ಈಡಿ.
– ಮುಂಬೈ ಪೊಲೀಸರು ನಡೆಸಿದ ದಾಳಿ ಮತ್ತು ತನಿಖೆ ಈಡಿ (ED) ನಡೆಸಿದ ತನಿಖೆಗೆ ಭಿನ್ನವಾಗಿದೆ ಎಂದಿರುವ ಈಡಿ.
– ಮುಂಬೈ ಪೊಲೀಸರು ಮೇಲ್ನೋಟಕ್ಕಷ್ಟೇ ಮತ್ತು ಕೆಲವು ಮಿತಿಗಳಷ್ಟೇ ಫೋರೆನ್ಸಿಕ್ ಆಡಿಟ್ (Forensic Audit) ಕೈಗೊಂಡಿದ್ದರು.
– ಮುಂಬೈ ಪೊಲೀಸರ ಆರೋಪಪಟ್ಟಿ ಪ್ರಕಾರ ಆರ್ಎಂಎಸ್ (RMs) ಕಂಪನಿಯು ರಿಪಬ್ಲಿಕ್ ಟಿವಿಯನ್ನು ನೋಡುವಂತೆ ಮನೆಗಳಲ್ಲಿನ ವೀಕ್ಷಕರಿಗೆ ಹಣ ಪಾವತಿಸಿತ್ತು. ಆದರೆ ಈಡಿ ಆರೋಪಪಟ್ಟಿ ಪ್ರಕಾರ ಇಂತಹ ಹಣ ವರ್ಗಾವಣೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
– ಆ ಮನೆಗಳಲ್ಲಿ ರಿಪಬ್ಲಿಕ್ ಟಿವಿಯ ಜೊತೆಗೆ ಇತರೆ ಚಾನೆಲ್ಗಳನ್ನೂ ನೋಡಲಾಗಿದೆ ಎಂದು ಬಾರ್ಕ್ ಡಾಟಾ ಆಧರಿಸಿ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿರುವ ಈಡಿ.
ADVERTISEMENT