ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ವೊಂದು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ.
ಪುತ್ತೂರು ತಾಲೂಕಿನ ನೀರಕಟ್ಟೆ ಸಮೀಪದ ಬಜತೂರುವಿನಲ್ಲಿ ಅಪಘಾತ ಸಂಭವಿಸಿದೆ. ಚಾಲಕ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಟ್ರಕ್ ಹಾಸನದಿಂದ ಉಪ್ಪಿನಂಗಡಿಗೆ ಹೋಗ್ತಿತ್ತು.
ಧಾರಾಕಾರ ಮಳೆಯ ಕಾರಣದಿಂದ ನಿಯಂತ್ರಣ ತಪ್ಪಿ ಕಂದಕಕ್ಕೆ ಟ್ರಕ್ ಉರುಳಿಬಿದ್ದಿದೆ. ಮಳೆಯ ಕಾರಣದಿಂದ ಟ್ರಕ್ ಅರ್ಧ ಮುಳುಗಡೆ ಆಗಿತ್ತು.
ADVERTISEMENT
ADVERTISEMENT