ಹೊಸ ವರ್ಷ ಮೊದಲ ದಿನವೇ ಜಗತ್ತೇ ಬೆಚ್ಚಿಬೀಳುವಂತಹ ಪ್ರಕೃತಿ ವಿಕೋಪ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ.
ಪುಟ್ಟ ರಾಷ್ಟ್ರ ಜಪಾನ್ನಲ್ಲಿ ಭಾರೀ ತೀವ್ರತೆಯ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಭೂಕಂಪನ ಜಪಾನ್ನಲ್ಲಿ ಸಂಭವಿಸಿದೆ.
ಈ ಭೂಕಂಪದ ತೀವ್ರತೆ ಭಾರೀ ಸುನಾಮಿ ಉಂಟಾಗಬಹುದು ಎಂದು ಜಪಾನ್ನ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ. ಇಶಿಕಾವಾ, ನಿಗಾಟ ಮತ್ತು ಟೊಯಾಮಾದಲ್ಲಿ ಭಾರೀ ಸುನಾಮಿ ಅಲೆಗಳು ಎದ್ದೇಳುವ ಎಚ್ಚರಿಕೆ ನೀಡಲಾಗಿದೆ.