No Result
View All Result
ಆಂಧ್ರ ಪ್ರದೇಶದಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ವತಿಯಿಂದ ಚಿಕ್ಕಮಕ್ಕಳಿಗೆ ಉಚಿತವಾಗಿ ಹಾರ್ಟ್ ಆಪರೇಷನ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚಾಗುವ ಸೇವೆಗಳಿಗೆ ಇಲ್ಲಿ ಉಚಿತವಾಗಿ ಒದಗಿಸುತ್ತಿದ್ದೇವೆ ಎಂದು ಟಿಟಿಟಿ ಹೇಳಿದೆ.
ತಿರುಪತಿಯ ಸ್ವಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಪದ್ಮಾವತಿ ಚಿಕ್ಕಮಕ್ಕಳ ಹೃದಯಾಲಯದಲ್ಲಿ ಹುಟ್ಟಿನಿಂದಲೇ ಬರುವ ಹೃದಯ ಸಮಸ್ಯೆಗಳಿಂದ ಹಿಡಿದು ಹೃದಯಕ್ಕೆ ಸಂಬಂಧಿಸಿದ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಟಿಟಿಡಿಯ ವೆಂಕಟೇಶ್ವರ ಪ್ರಾಣದಾನಂ ಟ್ರಸ್ಟ್ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತಿದೆ.
ಯಾವ ಯಾವ ಸಮಸ್ಯೆಗಳಿಗೆ ಚಿಕಿತ್ಸೆ?
– ಹೃದಯದಲ್ಲಿ ರಂಧ್ರ
– ಹೃದಯಯದ ಕವಾಟಗಳಲ್ಲಿ ಬ್ಲಾಕ್ಸ್ ಇಲ್ಲವೇ ಲೀಕ್ಸ್
– ಒಳ್ಳೆಯ ರಕ್ತದಲ್ಲಿ ಕೆಟ್ಟ ರಕ್ತ ಸೇರುವುದು.. ಇದನ್ನೇ ಡಿ ಆಕ್ಸಿನೇಟೆಡ್ ಬ್ಲಡ್ ಎಂದು ಕರೆಯುತ್ತಾರೆ.
– ರಕ್ತನಾಳಗಳು ಹುಟ್ಟಿನಿಂದಲೇ ತಿರುಗಿರುವುದು. ಇದನ್ನು ಟ್ರಾನ್ಸ್ ಪೊಸಿಷನ್ ಆಫ್ ಗ್ರೇಟ್ ಆರ್ಟರೀಸ್ ಎನ್ನುತ್ತಾರೆ.
– ರಕ್ತನಾಳಗಳು ಮುಚ್ಚಿ ಹೋಗಿರುವುದು
ಸೇವೆಗಳನ್ನು ಹೊಂದಲು ಏನು ಮಾಡಬೇಕು?
ಆಂಧ್ರದಲ್ಲಿ ಆರೋಗ್ಯ ಶ್ರೀ ಕಾರ್ಡ್ ಇದ್ದಲ್ಲಿ ಉಚಿತ. ಅಥವಾ ಸಿಎಂ ರಿಲೀಫ್ ಫಂಡ್ ಬಳಸಿಕೊಂಡು ಉಚಿತವಾಗಿ ಆಪರೇಷನ್ಗಳನ್ನು ನಿರ್ವಹಿಸಲಾಗುತ್ತಿದೆ. ರೋಗ, ಸಮಸ್ಯೆಗೆ ಅನುಗುಣವಾಗಿ ಓಪನ್ ಹಾರ್ಟ್ ಸರ್ಜರಿ, ಕೀ ಹೋಲ್ ಪ್ರೊಸೀಜರ್ ಸೇರಿ ಹಲವು ರೀತಿಗಳನ್ನು ಸೇವೆಗಳನ್ನು ಉಚಿತವಾಗಿ ಟಿಟಿಡಿ ನೀಡುತ್ತಿದೆ.
ಬೇರೆ ರಾಜ್ಯದವರಿಗೂ ಉಚಿತನಾ?
ಬರೀ ಆಂಧ್ರ ಪ್ರದೇಶದ ರೋಗಿಗಳು ಮಾತ್ರವಲ್ಲ.. ಕರ್ನಾಟಕ, ತೆಲಂಗಾಣ ಸೇರಿ ದೇಶದ ಯಾವುದೇ ರಾಜ್ಯದಲ್ಲಿದ್ದವರು ಸಹ ಇದರ ಪ್ರಯೋಜನ ಪಡೆಯಬಹುದಾಗಿದೆ.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದ್ದರೇ ಸಾಕು ಮಕ್ಕಳಿಗೆ ಉಚಿತ ಹಾರ್ಟ್ ಆಪರೇಷನ್ ಮಾಡಿಸಬಹುದು.
ಆಯುಷ್ಮಾನ್ ಕಾರ್ಡ್ ಇಲ್ಲದವರಿಗೆ, ಭಾರತೀಯ ಪ್ರಜೆಗಳು ಅಲ್ಲದವರಿಂದ ಕೇವಲ ಔಷಧಿಗಳಿಗೆ ಆಗುವ ಖರ್ಚನ್ನು ಮಾತ್ರ ವಸೂಲಿ ಮಾಡಲಾಗುತ್ತದೆ.
ಖಾಸಗಿ ಆಸ್ಪತ್ರೆಗಳಲ್ಲಿ 10 ಲಕ್ಷ ವೆಚ್ಚವಾಗುವ ಸರ್ಜರಿಗಳನ್ನು ಕೇವಲ 2 ಲಕ್ಷಕ್ಕೆ ಇಲ್ಲಿ ಮಾಡಲಾಗುತ್ತಿದೆ ಎಂದು ಶ್ರೀ ಪದ್ಮಾವತಿ ಚಿಕ್ಕಮಕ್ಕಳ ಹೃದಯಾಲಯದ ನಿರ್ದೇಶಕ ಶ್ರೀನಾಥ್ ರೆಡ್ಡಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಹೇಗೆ ಹೋಗಬೇಕು? ಯಾರನ್ನು ಸಂಪರ್ಕಿಸಬೇಕು?
ಬೆಂಗಳೂರು ಸೇರಿ ಕರ್ನಾಟಕದಿಂದ ತೆರಳುವವರು ಬಸ್ ಇಲ್ಲವೇ ರೈಲು ಮಾರ್ಗದ ಮೂಲಕ ತಿರುಪತಿ ತಲುಪಬಹುದು. ಬಸ್ ಅಥವಾ ರೈಲ್ವೇ ನಿಲ್ದಾಣದಿಂದ ಆಟೋ, ಕ್ಯಾಬ್ಗಳಲ್ಲಿ ಸ್ವಿಮ್ಸ್ ಆಸ್ಪತ್ರೆ ತಲುಪಬಹುದು.
ಯಾವುದೇ ಮಾಹಿತಿ ಬೇಕಿದ್ದಲ್ಲಿ 087-722-648-74 ಗೆ ಕರೆ ಮಾಡಬಹುದಾಗಿದೆ
No Result
View All Result
error: Content is protected !!