ತಾಲಿಬಾನ್ ಆಡಳಿತದ ಆಫ್ಘಾನಿಸ್ತಾನದಲ್ಲಿ ಪೌರರು ದೀನ ಅವಸ್ಥೆಯಲ್ಲಿದ್ದಾರೆ. ತಾಲಿಬಾನ್ ಆಡಳಿತ ಬರುವ ಮೊದಲು ಆಫ್ಘಾನಿಸ್ತಾನದಲ್ಲಿ ಫೇಮಸ್ ಜರ್ನಲಿಸ್ಟ್ ಆಗಿದ್ದ ಮೂಸಾ ಮಹಮ್ಮದಿ ಈಗ ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬವನ್ನು ಪೋಷಿಸಲು ಬೀದಿಗಳಲ್ಲಿ ಸಮೋಸಾ ಮಾಡುತ್ತಿದ್ದಾರೆ.
ಈ ಫೋಟೋಗಳನ್ನು ಕಬೀರ್ ಹಕ್ಮಲ್ ಟ್ವೀಟ್ ಮಾಡಿದ್ದು, ಇದು ಹಿರಿಯ ಪತ್ರಕರ್ತರೊಬ್ಬರ ಪರಿಸ್ಥಿತಿ. ತಾಲಿಬಾನ್ ಸರ್ಕಾರ ಬಂದ ಮೇಲೆ ಆಫ್ಘಾನಿಸ್ತಾನ ಹಿಂದೆಂದೂ ಇಲ್ಲದ ಬಡತನಕ್ಕೆ ಜಾರಿದೆ ಎಂದಿದ್ದಾರೆ.
ನಿರೂಪಕ ಮೂಸಾ ಮಹಮ್ಮದಿ ಅವರ ಈ ಸುದ್ದಿ ಆಫ್ಘಾನಿಸ್ತಾನದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಸುದ್ದಿ ನೋಡಿದ ಆಫ್ಘಾನಿಸ್ತಾನದ ರಾಷ್ಟ್ರೀಯ ರೇಡಿಯೋ ಮತ್ತು ಟೆಲಿವಿಷನ್ ನಿರ್ದೇಶಕರಾದ ಅಹಮದುಲ್ಲಾ ಅವರು ಮೊಹಮ್ಮದಿ ಅವರಿಗೆ ಮರಳಿ ಕೆಲಸ ನೀಡುವ ಭರವಸೆ ನೀಡಿದ್ದಾರೆ.
Journalists life in #Afghanistan under the #Taliban. Musa Mohammadi worked for years as anchor & reporter in different TV channels, now has no income to fed his family. & sells street food to earn some money. #Afghans suffer unprecedented poverty after the fall of republic. pic.twitter.com/nCTTIbfZN3
— Kabir Haqmal🇦🇫 (@Haqmal) June 15, 2022
ಆಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಆರ್ಥಿಕ ಹಾಗೂ ಮಾನವ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಲೇ ಇದೆ.
ಕಳೆದ 4 ತಿಂಗಳುಗಳಲ್ಲಿ ಆಪ್ಘಾನಿಸ್ತಾನದ ರಾಷ್ಟ್ರೀಯ ಆದಾಯದಲ್ಲಿ 3 ರಲ್ಲಿ 1 ರಷ್ಟು ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಹೇಳಿದೆ. ಬಡ ರಾಷ್ಟ್ರಗಳು ಮತ್ತಷ್ಟು ಬಡತನದತ್ತ ಸಾಗುತ್ತಿವೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಿದೆ.