ADVERTISEMENT
ಪ್ರಚೋದನಕಾರಿ ರೀಲ್ಸ್ ಹಾಕಿದ್ದರ ಸಂಬಂಧ ಯಾದಗಿರಿ ಜಿಲ್ಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಯಾದಗಿರಿ ತಾಲೂಕಿನ ಅಶನಾಳ ಗ್ರಾಮದ 23 ವರ್ಷದ ಅಕ್ಬರ್ ಸೈಯದ್ ಬಹದ್ದೂರ್ ಅಲಿ ಮತ್ತು ಹತ್ತಿಕುಣಿ ಕ್ರಾಸ್ ನಿವಾಸಿ 21 ವರ್ಷದ ಮೊಹಮ್ಮದ್ ಅಯಾಜ್ ಬಂಧಿತರು.
ಪ್ರಚೋದನಕಾರಿ ರೀಲ್ಸ್ ಸಂಬಂಧ ನೀರಜ್ ಅತ್ರಿ ಎಂಬವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟ್ಟರ್ನಲ್ಲಿ ಟ್ಯಾಗ್ ಮಾಡಿದ್ದರು.
ಆ ಬಳಿಕ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಕಲಂ 153 ಮತ್ತು 505/2ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ADVERTISEMENT