ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ನಾಳೆ ಮತ್ತು ನಾಡಿದ್ದು ಅಂದರೆ ಸೋಮವಾರ ಮತ್ತು ಮಂಗಳವಾರ ಮುಷ್ಕರ ಮತ್ತು ಭಾರತ ಬಂದ್ಗೆ ಕರೆ ನೀಡಿವೆ.
ಈ ಮುಷ್ಕರದಲ್ಲಿ ಅಖಿಲ ಭಾರತದ ಬ್ಯಾಂಕ್ ನೌಕರರ ಸಂಘಟನೆ ಪಾಲ್ಗೊಳ್ಳುತ್ತಿದ್ದು, ಹೀಗಾಗಿ ಎರಡೂ ದಿನ ಬ್ಯಾಕಿಂಗ್ ವ್ಯವಹಾರದಲ್ಲಿ ವ್ಯತ್ಯಯ ಆಗುವ ನಿರೀಕ್ಷೆ ಇದೆ.
ಬ್ಯಾಂಕ್ಗಳ ಖಾಸಗೀಕರಣಕ್ಕೆ ಬ್ಯಾಂಕ್ ನೌಕರರ ಸಂಘಟನೆ ವಿರೋಧಿಸುತ್ತಿದೆ.
ಬ್ಯಾಂಕ್ ನೌಕರರು ಮಾತ್ರವಲ್ಲದೇ ಕಲ್ಲಿದ್ದಲು, ಉಕ್ಕು, ದೂರಸಂಪರ್ಕ, ಅಂಚೆ, ವಿಮೆ ವಲಯದ ನೌಕರರು ಭಾಗವಹಿಸುವ ನಿರೀಕ್ಷೆ ಇದೆ. ಇದರ ಜೊತೆಗೆ ರೈಲ್ವೆ ಕಾರ್ಮಿಕರು ದೇಶಾದ್ಯಂತ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.