ಹಿಂದೂ ಧರ್ಮಿಯರ ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿಗಳಿಗೆ ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಬ್ಯಾನರ್ಗಳನ್ನು ಹಾಕುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಯು ಟಿ ಖಾದರ್ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ಕಾರಣವಾಗಿದೆ.
ಹಿಜಾಬ್ನಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಯನ್ನು ಬಗೆಹರಿಸುವಂತೆ ಯು ಟಿ ಖಾದರ್ ಅವರು ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಬಿಜೆಪಿ ಶಾಸಕರ ಹೆಸರನ್ನೂ ಪ್ರಸ್ತಾಪಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಪುತ್ತೂರು ಶಾಸಕ ಸಂಜೀವ್ ಮಠಂದೂರು ಹೆಸರನ್ನು ಹೇಳಿ,
`ನಮ್ಮ ಮಿತ್ರರಾದ ಹರೀಶ್, ವೇದವ್ಯಾಸ ಕಾಮತ್, ಸಂಜೀವ್ ಮಠಂದೂರು ಎಲ್ಲರೂ ಒಳ್ಳೆಯವರು, ಅವರೂ ಕೂಡಾ ಮುಸ್ಲಿಮರಿಗೆ ಸಪೋರ್ಟ್, ಅವರು ವಿರೋಧ ಇಲ್ಲ. ಅವರ ಗುತ್ತಿಗೆದಾರರೆಲ್ಲ ಮುಸ್ಲಿಮರೇ. ಎಲ್ಲರಿಗೂ ಕೂಡಾ ಅವಕಾಶ ಮಾಡಿಕೊಟ್ಟಿದ್ದಾರೆ. ಕೆಲವೊಮ್ಮೆ ರಾಜಕೀಯವಾಗಿ ಅವರು ಉಪಾಯವಿಲ್ಲದೇ ಈ ರೀತಿ ಮಾತಾಡ್ತಿದ್ದಾರೆ’ ಎ ಂದು ಹೇಳುವ ಮೂಲಕ ಖಾದರ್ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.