ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಊಬರ್ ತನ್ನ ಪ್ರಯಾಣಿಕರಿಗೆ ಆಘಾತ ನೀಡಿದೆ. ಊಬರ್ ಕ್ಯಾಬ್, ಆಟೋಗಳಲ್ಲಿ ಪ್ರಯಾಣದರವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಳ ಮಾಡಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಾಲಕರ ಆದಾಯ ಹೆಚ್ಚಿಸುವ ಸಲುವಾಗಿ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ. ಪ್ರಯಾಣದರ ಹೆಚ್ಚಳದ ಮೊತ್ತದ ಲಾಭವನ್ನು ಊಬರ್ ತನ್ನ ಚಾಲಕರಿಗೆ ವರ್ಗಾಯಿಸಲಿದೆ.
ಎಲ್ಲಿಗೆ ಹೋಗಬೇಕು ಎಂಬ ಸ್ಥಳದ ಮ್ಯಾಪ್ನ್ನು ಚಾಲಕರು ತಾವು ಆ ರೈಡಿಂಗ್ ಸ್ವೀಕರಿಸುವ ಮೊದಲೇ ನೋಡುವ ಅವಕಾಶವನ್ನೂ ಊಬರ್ ನೀಡಿದೆ. ದೂರ ಪ್ರಯಾಣದ ಪಿಕ್ ಅಪ್ ಇದ್ದಲ್ಲಿ ಆ ಪ್ರಯಾಣಕ್ಕೆ ಚಾಲಕರಿಗೆ ಹೆಚ್ಚುವರಿ ಮೊತ್ತವನ್ನು ಊಬರ್ ಪಾವತಿ ಮಾಡುತ್ತದೆ.
ಊಬರ್ ಚಾಲಕರು ಕೇವಲ ನಗದು ರೂಪದಲ್ಲಿ ಪ್ರಯಾಣಿಕರಿಂದ ಹಣ ಸ್ವೀಕರಿಸುವ ಅವಕಾಶವನ್ನೂ ನೀಡಲಾಗಿದೆ.
ಉದ್ಯಮ ಮತ್ತು ಹೊರ ಊರುಗಳಿಗೆ ಪ್ರವಾಸ ಹೋಗುವವರಿಂದ ಊಬರ್ ಸೇವೆಗೆ ಹೆಚ್ಚು ಬೇಡಿಕೆ ಇರುವುದರಿಂದ ದರ ಹೆಚ್ಚಳ ಮತ್ತು ಇತರೆ ಬದಲಾವಣೆಗಳನ್ನು ಮಾಡಲಾಗಿದೆ.