ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯ ಆರೋಪಿಗಳಿಗೆ ವಿದೇಶದ ಸಂಪರ್ಕ ಇದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದಾರೆ.
ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ಮಂಗಳವಾರ ಉದಯ್ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಅವರನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಶಿರಚ್ಚೇದ ಮಾಡಿ ಹತ್ಯೆ ಮಾಡಿದ್ದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಕನ್ಹಯ್ಯ ಲಾಲ್ ಹತ್ಯೆಯ ಹಿಂದೆ ಸಮಾಜದಲ್ಲಿ ಭಯ ಸೃಷ್ಠಿಸುವ ಉದ್ದೇಶವಿರುವುದು ದೃಢಪಟ್ಟಿದೆ. ಆರೋಪಿಗಳು ವಿದೇಶಿ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
Udaipur murder meant to spread terror. Information that killers have contacts aborad has also surfaced: Rajasthan CM Ashok Gehlot
— Press Trust of India (@PTI_News) June 29, 2022
ಈ ಹತ್ಯೆಯ ಹಿಂದೆ ವಿದೇಶಿ ಸಂಪರ್ಕವಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿದೆ.
ಉದಯ್ಪುರದಲ್ಲಿ ಒಂದು ತಿಂಗಳ ಪೂರ್ತಿ ಕರ್ಪ್ಯೂ ಜಾರಿಮಾಡಲಾಗಿದೆ.