ಕೇರಳದ ತ್ರಿಕ್ಕಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್ ದಾಖಲೆಯ ಮತಗಳಿಂದ ಗೆದ್ದಿದ್ದಾರೆ.
ಈ ಮೂಲಕ ಯುಡಿಎಫ್ ಮೈತ್ರಿಕೂಟ ಕ್ಷೇತ್ರವನ್ನು ಉಳಿಸಿಕೊಂಡಿದೆ. 2021ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾಗಿ ಪಿ ಟಿ ಥಾಮಸ್ 14,329 ಮತಗಳಿಂದ ಗೆದ್ದಿದ್ದರು. ಆದರೆ ಅವರ ನಿಧನದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಥಾಮಸ್ ಅವರ ಪತ್ನಿ ಉಮಾ ಥಾಮಸ್ ಅವರಿಗೆ ಟಿಕೆಟ್ ನೀಡಿತ್ತು.
ಎಡಪಕ್ಷಗಳ ಮೈತ್ರಿಕೂಟ ಡಾ ಜೋ ಜೋಸೆಫ್ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯಿಂದ ಈ ಬಾರಿ ಎ ಎನ್ ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿತ್ತು.
ಕೇರಳದಲ್ಲಿ ಪಿಣರಾಯ್ ವಿಜಯನ್ ನೇತತ್ವದ ಎಡರಂಗ ಸರ್ಕಾರವಿದ್ದರೂ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಗೆದ್ದು ತಾನು ಕ್ಷೇತ್ರ ಉಳಿಸಿಕೊಂಡಿದ್ದು ಮಾತ್ರವಲ್ಲ ಕಳೆದ ಬಾರಿಗಿಂತ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದೆ. ಇದು ಪಿಣರಾಯ್ ಸರ್ಕಾರದ ವಿರುದ್ಧದ ಜನಾಭಿಪ್ರಾಯ ಕಾಂಗ್ರೆಸ್ ಬಣ್ಣಿಸಿದೆ.
ಇತ್ತ ಕಳೆದ ಬಾರಿ 15,483 ಮತಗಳಿಂದ ಪಡೆದಿದ್ದ ಬಿಜೆಪಿ ಈ ಬಾರಿ 8 ಸಾವಿರ ಮತಗಳನ್ನೂ ದಾಟಿಲ್ಲ.