ಮಹಾ ಕಾಲೇಶ್ವರನ (Maha Kaleshwar) ಶ್ರೀ ಕ್ಷೇತ್ರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ (Ujjain) ಮಂಗಳವಾರದಿಂದ ಹೊಸದೊಂದು ಅಧ್ಯಾತ್ಮಿಕ ಲೋಕ ತೆರೆದುಕೊಳ್ಳಲಿದೆ.
ಪುರಾತನ ಆಲಯದ ಅವರಣದ ಅಭಿವೃದ್ಧಿ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 856 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಪುರಾಣವನ್ನು ಮಹಾಕಾಲ್ ಲೋಕದ (Mahakal Lok)ರೂಪದಲ್ಲಿ ಧರೆಗೆ ಇಳಿಸಲಾಗಿದೆ.
50ಕ್ಕೂ ಹೆಚ್ಚು ಆಧ್ಯಾತ್ಮಿಕ ಕಲಾಕೃತಿಗಳು ನೋಡುಗರ ಮನಸೊರೆಗೊಳ್ಳಲಿವೆ. ಈ ಅದ್ಭುತ, ಮಹಾ ಅದ್ಭುತ ಎನ್ನಬಹುದಾದ ಮಹಾಕಾಲ ಲೋಕವನ್ನು ಪ್ರಧಾನಿ ನರೇಂದ್ರ ಮೋದಿ (PrimeMinister Narendra Modi ) ಲೋಕಾರ್ಪಣೆ ಮಾಡಲಿದ್ದಾರೆ.