ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ರಾಜ್ಯಸಭೆ ಸದಸ್ಯ ಜಿವಿಎಲ್ ನರಸಿಂಹರಾವ್ ಯಡವಟ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿಸುವ ಕರ್ನಾಟಕದ ಮತದಾರರನ್ನು ಅವಿದ್ಯಾವಂತರು, ಬಡವರು ಎಂದು ಹಂಗಿಸಿದ್ದಾರೆ. ಎನ್ಡಿ ಡಿವಿ ಇಂಡಿಯಾ ವಾಹಿನಿ ನಿನ್ನೆ ಸಿಎಸ್ಡಿಎಸ್ ಸಮೀಕ್ಷೆಯನ್ನು ಪ್ರಕಟಿಸಿತ್ತು. ಈ ಸಮೀಕ್ಷೆಯಲ್ಲಿ ಕರ್ನಾಟಕದ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದರು.
ಡಿಬೇಟ್ನಲ್ಲಿ ಬಿಜೆಪಿ ಪರವಾಗಿ ಮಾತನಾಡಲು ಬಂದಿದ್ದ ರಾಜ್ಯಸಭಾ ಜಿವಿಎಲ್ ನರಸಿಂಹರಾವ್ಗೆ ಇದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಬೆಂಬಲಿಸುವ ಮತದಾರರು ಅವಿದ್ಯಾವಂತರು ಮತ್ತು ಬಡವರು ಆಗಿರುತ್ತಾರೆ. ಅವರಿಗೆ ಬಿಜೆಪಿಯ ನೀತಿಗಳು ಗೊತ್ತಾಗಲ್ಲ. ಬಿಜೆಪಿಯನ್ನು ಬೆಂಬಲಿಸುವವರು ಸುಶಿಕ್ಷಿತರು, ಸಿರಿವಂತರು ಆಗಿರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದಕ್ಕೆ ತಕ್ಷಣವೇ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಈ ರೀತಿ ಮಾತನಾಡುವ ಮೂಲಕ ಮತದಾರರಿಗೆ ಅಪಮಾನ ಮಾಡುತ್ತಿದ್ದೀರಿ.. ಈ ಕೂಡ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಿವಿಎಲ್ ನರಸಿಂಹರಾವ್ ಮಾತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷ ಕೂಡ ಟ್ವೀಟ್ ಮಾಡಿ ಕಿಡಿಕಾರಿದೆ.
ಕಾಂಗ್ರೆಸ್ನ ಮತದಾರರು ಅವಿದ್ಯಾವಂತರು,ಬಡವರಂತೆ.. ಬಿಜೆಪಿ ಮತದಾರರು ಸುಶಿಕ್ಷಿತರು, ಸಿರಿವಂತರಂತೆ.. ಇದು ಬಿಜೆಪಿಯ ರಾಜ್ಯಸಭಾ ಸದಸ್ಯ ಮತದಾರರನ್ನು ಅವಮಾನಕಾರಿಯಾಗಿ ಬರ್ಗೀಕರಿಸಿದ ರೀತಿ. ಬಿಜೆಪಿಗೆ ಸಮಾನತೆಯ ಮೇಲೆ ನಂಬಿಕೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಮಾಜ ಒಡೆಯಲು ಜಾತಿ ಧರ್ಮಗಳ ಜೊತೆಗೆ ಮತ್ತೊಂದು ದಾರಿಯನ್ನು ಬಿಜೆಪಿ ಹುಡುಕಿದೆ ಎಂದು ಟ್ವೀಟ್ ಮಾಡಿದೆ.