No Result
View All Result
ವಿದ್ಯುತ್ ಚಾಲಿತ ವಾಹನಗಳಿಗೆ (Electric Vehicles) ಕೇಂದ್ರ ಸರ್ಕಾರ ತಾನು ನೀಡುತ್ತಿದ್ದ ಸಬ್ಸಿಡಿ ಕೊನೆಯಾಗುವ ಸಾಧ್ಯತೆ ಇದೆ. ಸಬ್ಸಿಡಿ ಅಂತ್ಯಗೊಳಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಆಲೋಚನೆ ಮಾಡುತ್ತಿದೆ.
2019ರ ಬಜೆಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಫೇಮ್-2 ಯೋಜನೆಯಡಿಯಲ್ಲಿ (Faster Adoption and Manufacturing of Hybrid and Electric Vehicles (FAME II) ವಿದ್ಯುತ್ ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡುವ ಘೋಷಣೆ ಮಾಡಿತ್ತು. ಏಪ್ರಿಲ್ 1ರಿಂದ ಜಾರಿಯಾದ ಯೋಜನೆಗೆ ಐದು ವರ್ಷದ ಅವಧಿಗೆ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಯೋಜನೆಯ ಐದು ವರ್ಷದ ಅವಧಿ ಮುಂದಿನ ವರ್ಷದ ಮಾರ್ಚ್ 31ರಂದು ಕೊನೆಯಾಗಲಿದೆ.
ಈ ಯೋಜನೆಯಡಿಯಲ್ಲಿ ವಿದ್ಯುತ್ ಚಾಲಿತ ಕಾರು, ಆಟೋ, ದ್ವಿಚಕ್ರ ವಾಹನಗಳಿಗೆ ಖರೀದಿ ವೇಳೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ.
ಇದೇ ವರ್ಷದ ಜೂನ್ನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ (electric two-wheeler) ಖರೀದಿಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಶೇಕಡಾ 40ರಿಂದ ಶೇಕಡಾ 15ಕ್ಕೆ ಇಳಿಸಿತ್ತು. ಕಿಲೋವ್ಯಾಟ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು 10 ಸಾವಿರ ರೂಪಾಯಿಗೆ ಇಳಿಸಿತ್ತು.
ಸಬ್ಸಿಡಿ ಕಡಿತದ ಬಳಿಕ ವಿದ್ಯುತ್ ಚಾಲಿತ ಬೈಕ್ಗಳ (electric two-wheeler) ಮಾರಾಟ ಇಳಿಕೆಯಾಗಿತ್ತಾದರೂ ಈಗ ಮಾರಾಟ ಏರಿಕೆ ಆಗಿರುವ ಕಾರಣ ಸರ್ಕಾರ ಸಬ್ಸಿಡಿ ಯೋಜನೆ ಮುಂದುವರೆಸದಿರುವ ಬಗ್ಗೆ ಆಲೋಚನೆ ಮಾಡುತ್ತಿದೆ.
No Result
View All Result
error: Content is protected !!