ಕೇಂದ್ರ ಸಚಿವರಾಗಿ ಕರ್ನಾಟಕಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಗುಜರಾತ್ನಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿರುವ ಅಮೆರಿಕ ಮೂಲದ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಕುಮಾರಸ್ವಾಮಿ ಅವರು ಗುಜರಾತ್ನಲ್ಲಿ ಅಮೆರಿಕದ ಕಂಪನಿಗೆ ನೀಡಲಾಗುತ್ತಿರುವ ಸಬ್ಸಿಡಿ ಪ್ರಶ್ನೆ ಕೇಳಿದ್ದಾರೆ.
ನಾನು ಮೊನ್ನೆ ನಮ್ಮ ಅಧಿಕಾರಿಗಳಿಗೆ ಮಾತು ಹೇಳಿದೆ. ಗುಜರಾತ್ನಲ್ಲಿ ಸೆಮಿ ಕಂಡಕ್ಟರ್ ಯೂನಿಟ್ನ್ನು ತರಬೇಕು ಅಂತ ಹೊರಟ್ರು. ಸೆಮಿ ಕಂಡಕ್ಟರ್ನ್ನು ಉತ್ಪಾದನೆ ಮಾಡುವಂತಹ ಯೋಜನೆ. ಮೈಕ್ರಾನ್ ಎಂಬಂತ ಕಂಪನಿ, ಹೆಸರು ಹೇಳಬಾರದು ಬಹುಶಃ, ಅದೇನ್ ಬರೆಯೋದು ಬೇಡ (ಮಾಧ್ಯಮಗಳಿಗೆ ಮನವಿ). ಆ ಕಂಪನಿ ಒಂದು ಯುನಿಟ್ನ್ನು ದೇಶದಲ್ಲಿ ಹಾಕ್ತೀವಿ ಅಂತ ಬಂದಿದ್ದಾರೆ, ಆ ಕಂಪನಿಯ ಒಟ್ಟು ಹೂಡಿಕೆ 2.75 ಬಿಲಿಯನ್ ಡಾಲರ್. ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಡ್ತೀರುವ ಸಬ್ಸಿಡಿ ಶೇಕಡಾ 70. ಅವು ಉದ್ಯೋಗ ಸೃಷ್ಟಿ ಮಾಡೋದು ಎಷ್ಟು 5 ಸಾವಿರ. ಆ 5 ಸಾವಿರ ಉದ್ಯೋಗ ಸೃಷ್ಟಿ ಮಾಡೋದಕ್ಕೆ ನಾವು ಸಬ್ಸಿಡಿ ರೂಪದಲ್ಲಿ ಕೊಡ್ತಿರುವುದು 2 ಬಿಲಿಯನ್ ಡಾಲರ್ (3.2 ಕೋಟಿ ರೂ ಪ್ರತಿ ಉದ್ಯೋಗಕ್ಕೆ). ನಮ್ಮ ಸುರೇಶ್ ಬಾಬು ಇದ್ರು ಆವತ್ತು ಮೀಟಿಂಗ್ ಮಾಡ್ಬೇಕಾದ್ರೆ
ಎಂದು ಅಮೆರಿಕದ ಕಂಪನಿಗೆ ನೀಡಲಾಗ್ತಿರುವ ಸಬ್ಸಿಡಿ ವಿರುದ್ಧ ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ADVERTISEMENT
ADVERTISEMENT