ADVERTISEMENT
ಈಕೆಯ ಹೆಸರು ಸಾವಿತ್ರಿ ಥಾಕೂರು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವೆ. ಮೊದಲ ಬಾರಿಗೆ ಕೇಂದ್ರ ಮಂತ್ರಿ ಆಗಿರುವ ಈಕೆಗೆ ಸಿಕ್ಕಿರುವ ಖಾತೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವೆ. ಆದರೆ ಈ ಮಂತ್ರಿಗೆ ತಮ್ಮದೇ ಮಾತೃಭಾಷೆಯಾಗಿರುವ ಹಿಂದಿಯಲ್ಲಿ ಬೇಟಿ ಪಡಾವೋ ಬೇಟಿ ಬಚಾವೋ ಅನ್ನೋ ಘೋಷ ವಾಕ್ಯ ಬರೆಯಲು ಸಾಧ್ಯವಾಗಿಲ್ಲ.
ಈಕೆ ಸತತ ಮೂರು ಬಾರಿ ಗೆದ್ದು ಬಂದಿರುವ ಮಧ್ಯಪ್ರದೇಶದ ಧಾರ್ ಲೋಕಸಭಾ ಕ್ಷೇತ್ರದಲ್ಲಿ ಸ್ಕೂಲ್ ಚಲೋ ಅಭಿಯಾನವನ್ನು ಆಯೋಜಿಸಲಾಗಿತ್ತು. ಆ ವೇಳೆ ಈ ಮಂತ್ರಿ ವೈಟ್ಬೋರ್ಡ್ ಮೇಲೆ ಪ್ರಧಾನಿ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷ ವಾಕ್ಯವನ್ನು ಬರೆಯಬೇಕಿತ್ತು.
ಆದರೆ ಈ ಮಂತ್ರಿ ಬರೆದಿದ್ದು ಮಾತ್ರ ಬೆಡ್ಡಿ ಪಡೋ ಬಚ್ಹಾವ್ ಎಂದು.
ಪ್ರಧಾನಿ ಮೋದಿ ಸರ್ಕಾರದ ಮಂತ್ರಿಯವರು ಹೀಗೆ ತಪ್ಪುತಪ್ಪಾಗಿ ವೈಟ್ಬೋರ್ಡ್ನಲ್ಲಿ ಬಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಅಂದಹಾಗೆ ಮಂತ್ರಿಯವರು ತಾವೇ ಸಲ್ಲಿಸಿರುವ ಅಧಿಕೃತ ದಾಖಲೆಗಳ ಪ್ರಕಾರ 12ನೇ ತರಗತಿ ಓದಿರುವುದಾಗಿ ಹೇಳಿಕೊಂಡಿದ್ದಾರೆ.
ಮಂತ್ರಿಯವರಿಗೆ ಅವರದ್ದೇ ಸರ್ಕಾರ ಪ್ರಚಾರ ಮಾಡ್ತಿರುವ ಯೋಜನೆ ಘೋಷವಾಕ್ಯವನ್ನು ಅದೂ ತಮ್ಮ ಮಾತೃಭಾಷೆಯಾಗಿರುವ ಹಿಂದಿಯಲ್ಲೇ ಬರೆಯಲು ಸಾಧ್ಯವಾಗಿಲ್ಲ ಎಂದರೆ ಸಚಿವರಾಗಿ ತಮ್ಮ ಇಲಾಖೆಯನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.
ADVERTISEMENT