ಜುಲೈ 18ರಿಂದ ಅಂದರೆ ಸೋಮವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ ಆಗಲಿದೆ. ಈ ನಡುವೆ ಸಂಸತ್ತಿನಲ್ಲಿ ಯಾವ ಪದಗಳನ್ನು ಬಳಸಬಾರದು, ಯಾವ ಪದಗಳ ಬಳಕೆ ನಿಷೇಧ ಎಂಬ ಬಗ್ಗೆ ಪಟ್ಟಿ ಮಾಡಿ ಲೋಕಸಭಾ ಕಾರ್ಯಾಲಯ ಕಿರು ಹೊತ್ತಿಗೆಯನ್ನು ಪ್ರಕಟಿಸಿದೆ.
ಒಂದು ವೇಳೆ ಈ ಪದಗಳನ್ನು ಕಲಾಪದಲ್ಲಿ ಬಳಸಿದರೆ ಆಗ ಆ ಸಂಸತ್ತಿನ ಸದಸ್ಯ ಮಾಡಿದ ಭಾಷಣದ ದಾಖಲೆಗಳಿಂದ ಆ ಪದವನ್ನು ತೆಗಿಸಬಹುದು ಮತ್ತು ಆ ಪದಗಳನ್ನು ಮಾಧ್ಯಮಗಳೂ ಪ್ರಸಾರ ಅಥವಾ ಮುದ್ರಣ ಮಾಡುವಂತಿಲ್ಲ.
ಮುಂಗಾರು ಅಧಿವೇಶನದಿಂದ ಸಂಸತ್ತಿನಲ್ಲಿ ನಿಷೇಧಗೊಂಡಿರುವ ಪದಗಳು:
ಭ್ರಷ್ಟ:
ಜುಮ್ಲಾಜೀವಿ – ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಪಕ್ಷಗಳು ಬಳಸುವ ಆರೋಪಿತ ಹೆಸರು. 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದು ಜುಮ್ಲಾ ಆಗಿತ್ತು ಎಂದು ಈ ಹಿಂದೆ ಖಾಸಗಿ ಸುದ್ದಿವಾಹಿನಿಯಲ್ಲಿ ಹೇಳಿದ್ದ ಬಿಜೆಪಿ ನಾಯಕ ಅಮಿತ್ ಶಾ. ಈ ಹೇಳಿಕೆ ಬಳಿಕ ಜುಮ್ಲಾ ಜೀವಿ ಪದ ಸೃಷ್ಟಿ ಆಗಿತ್ತು.
ಕೋವಿಡ್ ಹಬ್ಬಿಸುವವನು:
ಸ್ನೂಪ್ಗೇಟ್:
ಲಜ್ಜೆಗೇಡಿತನ:
ನಿಂದನೆ, ದುರ್ಬಳಕೆ:
ನಂಬಿಕೆದ್ರೋಹಿ:
ನಾಟಕ:
ಹಿಪೋಕ್ರಸಿ:
ಅಸಮರ್ಥ:
ಅರಾಜಕ ಜೀವಿ:
ಶಕುನಿ:
ನಿರಂಕುಶವಾದಿ:
ತಾನ್ಶಾಹಿ:
ತಾನ್ಶಾಹಾ:
ವಿನಾಶಪುರುಷ:
ಜೈಚಂದ್:
ಖಾಲಿಸ್ತಾನಿ:
ರಕ್ತಪಾತ:
ನಿಕಮ್ಮ (ಅಸಮರ್ಥ):
ನೌಟಂಕಿ:
ಬೇಹ್ರಿ ಸರ್ಕಾರ್:
ಹೇಡಿ:
ಮೊಸಳೆ ಕಣ್ಣೀರು:
ಬ್ಲಡಿ:
ಚಮಚಾ:
ಚಮಾಚಾಗಿರಿ:
ಕತ್ತೆ:
ಕಣ್ಣುಕಟ್ಟು:
ತಪ್ಪು ದಾರಿಗೆಳೆಯುವುದು:
ಸುಳ್ಳು:
ಅಸತ್ಯ:
ಗದ್ದಾರ್:
ಗಿರ್ಗಿಟ್:
ಗೂಂಡಾಗಳು:
ಅಸತ್ಯ:
ಅಪಮಾನ:
ದಾದಾಗಿರಿ:
ಬೇಚಾರಾ:
ಬಾಬ್ಕಟ್:
ಲಾಲಿಪಪ್:
ವಿಶ್ವಾಸಘಾತ:
ಸಂವೇದನೆಹೀನ:
ಮೂರ್ಖ:
ಲೈಂಗಿಕ ಕಿರುಕುಳ:
ಚೇಲಾ:
ಅಸಂಸದೀಯ ಪದಗಳ ಹೊಸ ಪಟ್ಟಿ ಬಗ್ಗೆ ಕಾಂಗ್ರೆಸ್ ಒಳಗೊಂಡಂತೆ ಬಹುತೇಕ ಎಲ್ಲ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
1/2What is the point of parliament if you can't be creative in your criticism? Jumlajeevi ko jumlajeevi nahi bolnege to kya bolenge? Banning words is uncalled for ! https://t.co/buc01BbX5f
— Abhishek Singhvi (@DrAMSinghvi) July 14, 2022
This. pic.twitter.com/TiD3OFTmxY
— Priyanka Chaturvedi🇮🇳 (@priyankac19) July 14, 2022
All words used by the Opposition to describe the reality of Modi Sarkar now to be considered ‘unparliamentary’. What next Vishguru? pic.twitter.com/lx7MqIVutw
— Jairam Ramesh (@Jairam_Ramesh) July 14, 2022