ಕೇಂದ್ರೀಯ ಲೋಕಸೇವಾ ಆಯೋಗ (UPSC) ಅಧ್ಯಕ್ಷ ಡಾ ಮನೋಜ್ ಸೋನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ The Hindu ವರದಿ ಮಾಡಿದೆ.
ತಮ್ಮ ಅಧಿಕಾರವಧಿ ಕೊನೆ ಆಗುವುದಕ್ಕೂ ಮೊದಲೇ RSS ಜೊತೆಗೆ ನಂಟು ಹೊಂದಿರುವ ಮುಂಬೈ ಮೂಲದ ಮನೋಜ್ ಸೋನಿ ವೈಯಕ್ತಿಕ ಕಾರಣಗಳನ್ನು ಕೊಟ್ಟು ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಸೋನಿ ಅವರನ್ನು ಕೇಂದ್ರೀಯ ಲೋಕಸೇವಾ ಆಯೋಗದ ಮುಖ್ಯಸ್ಥರನ್ನಾಗಿ ಮೇ 16, 2023ರಲ್ಲಿ ನೇಮಿಸಿತ್ತು. ಇವರ ಕಾರ್ಯಾವಧಿ ಕೊನೆಯಾಗುವುದು 2019ರಲ್ಲಿ.
ಮುಖ್ಯಸ್ಥ ಹುದ್ದೆಯ ಅವಧಿ ಇನ್ನೂ 5 ವರ್ಷ ಬಾಕಿ ಇದ್ದರೂ ಸೋನಿ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.
2017ರಲ್ಲಿ ಮೋದಿ ಸರ್ಕಾರ ಸೋನಿ ಅವರನ್ನು ಯುಪಿಎಸ್ಸಿ ಸದಸ್ಯರನ್ನಾಗಿ ನೇಮಿಸಿತ್ತು.
ಆರ್ಎಸ್ಎಸ್ ನಂಟು ಹೊಂದಿರುವ ಡಾ ಮನೋಜ್ ಸೋನಿ ಅವರನ್ನು UPSC ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದರು. ಯೂನಿಯನ್ ಪ್ರಚಾರಕ್ ಸಂಘ್ ಕಮಿಷನ್ ಆಗುತ್ತಿದೆ ಎಂದು ಟೀಕಿಸಿದ್ದ ರಾಹುಲ್ ಗಾಂಧಿ, ಭಾರತದ ಸಂವಿಧಾನವನ್ನು ನೆಲಸಮ ಮಾಡಲಾಗಿದೆ, ಸಂವಿಧಾನಿಕ ಸಂಸ್ಥೆಯನ್ನು ನೆಲಸಮ ಮಾಡಲಾಗಿದೆ ಎಂದು ಕಿಡಿಕಾರಿದ್ದರು.
ADVERTISEMENT
ADVERTISEMENT