ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಮತ್ತು ಇತರೆ ಹುದ್ದೆಗಳಿಗೆ ನಡೆಸಲಾಗುವ ಯುಪಿಎಸ್ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶ ಪ್ರಕಟ ಆಗಿದೆ. 625 ಮಂದಿ ಅಭ್ಯರ್ಥಿಗಳು ಪಾಸಾಗಿದ್ದಾರೆ. ಮೊದಲ ಮೂರು ರ‍್ಯಾಂಕ್‌ನಲ್ಲಿ ಯುವತಿಯರ ಪಾಲಾಗಿದೆ.
ಜವಾಹರಲಾಲ್ ರಾಷ್ಟಿçÃಯ ವಿಶ್ವವಿದ್ಯಾಲಯ ಜೆಎನ್‌ಯುನ ಮಾಜಿ ವಿದ್ಯಾರ್ಥಿನಿ ಶ್ರುತಿ ಶರ್ಮಾ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಎರಡನೇ ರ‍್ಯಾಂಕ್‌ನ್ನು ಅಂಕಿತಾ ಅಗರ್‌ವಾಲ್ ಮತ್ತು ಮೂರನೇ ರ‍್ಯಾಂಕ್‌ನ್ನು ಗಾಮಿನಿ ಸಿಂಗ್ಲಾ ಪಡೆದುಕೊಂಡಿದ್ದಾರೆ.
ಕರ್ನಾಟಕದಿAದ 27 ಮಂದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. 244 ಮಂದಿ ಜನರಲ್ ಕೆಗಟರಿಯಲ್ಲಿ, 73 ಮಂದಿ ಆರ್ಥಿಕವಾಗಿ ದುರ್ಬಲ ವರ್ಗದಿಂದ, 203 ಮಂದಿ ಇತರೆ ಹಿಂದುಳಿದ ವರ್ಗದಿಂದ, 105 ಮಂದಿ ಎಸ್‌ಸಿ ಮತ್ತು 60 ಮಂದಿ ಎಸ್‌ಟಿ ಅಭ್ಯರ್ಥಿಗಳು ಪಾಸಾಗಿದ್ದಾರೆ.