ಅಫ್ಘಾನಿಸ್ತಾನದಲ್ಲಿ (Afghanistan) ಹೆಲಿಕಾಪ್ಟರ್ ಪತನವಾಗಿ 3 ಜನ ಸೈನಿಕರು ಸಾವನ್ನಪ್ಪಿದ್ದಾರೆ. ಅಮೇರಿಕಾದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ನ್ನು ಅಫ್ಘಾನಿಸ್ತಾನದ ತಾನಿಬಾನಿ ಯೋಧರು ತರಬೇತಿ ಪಡೆಯುವ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.
ಅಮೇರಿಕಾದ ಈ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅತ್ಯುನ್ನತ ಯುದ್ಧ ಹೆಲಿಕಾಪ್ಟರ್ ಹಾಗಿದೆ. ಈ ಹೆಲಿಕಾಪ್ಟರ್ ಬರೋಬ್ಬರಿ 30 ಮಿಲಿಯನ್ ಡಾಲರ್ (238 ಕೋಟಿ ರೂಪಾಯಿ) ಬೆಲೆಬಾಳುತ್ತದೆ. ಇಂತಹ ಹೆಲಿಕಾಪ್ಟರ್ನ್ನು ತರಬೇತಿ ಇಲ್ಲದ ಅಪ್ಘನ್ ಸೈನಿಕರು, ಚಲಾವಣೆ ಮಾಡಿ ಅಪಘಾತಕ್ಕೀಡಾಗಿದ್ದಾರೆ. ಅಲ್ಲದೇ, ಹೆಲಿಕಾಪ್ಟರ್ ಸಹಿತ ಪತನಗೊಂಡಿದೆ. ಆ ಮೂಲಕ ಅಮೇರಿಕಾದ ಸೇನಾ ಸಲಕರಣೆಗಳ ಅಫ್ಘಾನಿಸ್ತಾನದ ಸೈನಿಕರಿಗೆ ದೊರೆತಿರುವುದು ಮಂಗನ ಕೈಲಿ ಮಾಣಿಕ್ಯ ಕೊಟ್ಟಂತಾಗಿದೆ.
ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ಗಳನ್ನು ಹಾರಿಸಲು ನಮ್ಮ ಯೋಧರು ತರಬೇತಿ ಪಡೆಯುತ್ತಿದ್ದಾರೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯದ ವಕ್ತಾರ ಇನಾಯತುಲ್ಲಾ ಖೋವರಾಜ್ಮಿ ಹೇಳಿದ್ದಾರೆ. ತರಬೇತಿ ವೇಳೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಇದರಲ್ಲಿ 3 ಮಂದಿ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ : BREAKING : ಅಫ್ಘಾನಿಸ್ತಾನ: ಕ್ರಿಕೆಟ್ ಪಂದ್ಯ ವೇಳೆ ಸ್ಟೇಡಿಯಂನಲ್ಲಿ ಸ್ಫೋಟ
ಹೆಲಿಕಾಪ್ಟರ್ ಮೇಲಕ್ಕೆ ಹಾರುತ್ತಿರುವ ಮತ್ತು ಪತನಗೊಂಡಿರುವ ದೃಶ್ಯ ಇದೀಗ, ಸಾಮಾಜಿ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ಶಸ್ತ್ರಾಸ್ತ್ರಗಳು ಯುಎಸ್ ಸೈನ್ಯಕ್ಕೆ ಸೇರಿವೆ. ಯುಎಸ್ ಮಿಲಿಟರಿ ಅಫ್ಘಾನಿಸ್ತಾನವನ್ನು ತೊರೆದು ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. US ಮಿಲಿಟರಿಯು ಅಫ್ಘಾನಿಸ್ತಾನವನ್ನು ತೊರೆಯುವಾಗ, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಶಸ್ತ್ರಸಜ್ಜಿತ ವಾಹನಗಳು, ಹೆಲಿಕಾಪ್ಟರ್ಗಳು, ರಾಕೆಟ್ ಲಾಂಚರ್ಗಳು ಮತ್ತು ಯುದ್ಧ ವಿಮಾನಗಳನ್ನು ಅಲ್ಲಿಯೇ ಬಿಟ್ಟಿದೆ. ಅವುಗಳಲ್ಲಿ ಹೆಚ್ಚಿನವು ಹಾನಿಗೊಳಗಾಗಿದ್ದಾವೆ.
ತಾಲಿಬಾನ್ ಅಫ್ಘಾನಿಸ್ತಾನದ (Afghanistan) ಮೇಲೆ ಹಿಡಿತ ಸಾಧಿಸಿದಾಗ,ಎಲ್ಲಾ ಶಸ್ತ್ರಾಸ್ತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿತು. ತಾಲಿಬಾನ್ ಹೋರಾಟಗಾರರು ಇದನ್ನು ಚಲಾಯಿಸಲು ಮತ್ತು ಅದಕ್ಕಾಗಿ ತರಬೇತಿ ತೆಗೆದುಕೊಳ್ಳಲು ಆಗಾಗ ಪ್ರಯತ್ನಿಸುತ್ತಾರೆ. ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 130 ಕ್ಕೂ ಹೆಚ್ಚು ಜನ ಸಾವು