ವಾಟ್ಸ್ಆ್ಯಪ್ ಈಗ ಕೇವಲ ಸಂದೇಶ ಕಳುಹಿಸುವಿಕೆಗಾಗಿ ಮಾತ್ರವಲ್ಲದೇ, ಧ್ವನಿ ಕರೆ, ವೀಡಿಯೊ ಕರೆ, ಗುಂಪು ವೀಡಿಯೊ ಕರೆ, ಶಾಪಿಂಗ್ ಸೇರಿದಂತೆ ಹಲವು ಅಗತ್ಯ ಕಾರ್ಯಗಳನ್ನು ನಡೆಸಲು ಅನುಮತಿಸುತ್ತದೆ. ಇವುಗಳ ಜೊತೆಗೆ ನೀವು ವಾಟ್ಸ್ಆ್ಯಪ್ ನಲ್ಲಿ ‘ಪಾವತಿ’ ಮಾಡುವ ಸೌಲಭ್ಯವನ್ನು ಪಡೆಯುತ್ತೀರಿ.
ಈ ವೈಶಿಷ್ಟ್ಯವು ಬಳಕೆದಾರರಿಗೆ ತ್ವರಿತವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಬಳಕೆದಾರರು ಅವರ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಹ ಇಲ್ಲಿ ಅವಕಾಶವಿದೆ. ನೀವು ವಾಟ್ಸ್ಆ್ಯಪ್ ಅಪ್ಲಿಕೇಶನ್ನಲ್ಲಿನ ಸೆಟ್ಟಿಂಗ್ಗಳ ವಿಭಾಗದಿಂದ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು ಅಥವಾ ಹಣವನ್ನು ಕಳುಹಿಸುವಾಗ ಪಾವತಿ ಸ್ಕ್ರೀನ್ನಲ್ಲಿ ಕೂಡ ವೀಕ್ಷಿಸಬಹುದು.
ವಾಟ್ಸ್ಆ್ಯಪ್ ಪಾವತಿಗಳ ವೈಶಿಷ್ಟ್ಯವನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ NPCI ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಏಕೀಕೃತ ಪಾವತಿಗಳ ಇಂಟರ್ಫೇಸ್ ಅಥವಾ ಯುಪಿಐ ಆಧಾರಿತ ಪಾವತಿ ವಿಧಾನವಾಗಿರುವುದರಿಂದ, ವಾಟ್ಸ್ ಆ್ಯಪ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರೆ, ನೀವು ವಾಟ್ಸ್ಆ್ಯಪ್ ಪಾವತಿಗಳ ವೈಶಿಷ್ಟ್ಯವನ್ನು ಬಳಸಬಹುದಾಗಿದ್ದು, ವಾಟ್ಸ್ಆ್ಯಪ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು ಎಂಬುದರ ಮಾಹಿತಿ ಇಲ್ಲಿದೆ.
1) ನಿಮ್ಮ ಮೆಸೇಜ್ ಟೈಪಿಂಗ್ ಬಾಕ್ಸ್ ಪಕ್ಕ ಇರುವ ₹ ಮೇಲೆ ಕ್ಲಿಕ್ ಮಾಡಿ ಅಥವಾ ಮೂರು ಚುಕ್ಕಿಗಳುಳ್ಳ Payments ವಿಭಾಗಕ್ಕೆ ಹೋಗಿ Add Payment Method ಕ್ಲಿಕ್ ಮಾಡಿ
2) ನಂತರ GET STARTED ಅಥವಾ Continue ಮೇಲೆ ಕ್ಲಿಕ್ ಮಾಡಿ
3) ನಿಮ್ಮ ಖಾತೆಯಿರುವ ಬ್ಯಾಂಕ್ ಆಯ್ಕೆ ಮಾಡಿ
4) ಹಾಗೂ ನಿಮ್ಮ ಖಾತೆಯನ್ನು UPI ಪಿನ್ ಬಳಸಿ Verify ಮಾಡಿ.
ಸೆಟ್ಟಿಂಗ್ಗಳಿಂದ ನಿಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದ್ದು, ನಿಮ್ಮ ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ. ನೀವು Android ಹೊಂದಿದ್ದರೆ, ಮೋರ್ ಆಯ್ಕೆಯನ್ನು ಟ್ಯಾಪ್ ಮಾಡಿ. ನೀವು ಐಫೋನ್ ಹೊಂದಿದ್ದರೆ, ಸೆಟ್ಟಿಂಗ್ಗಳನ್ನು ಟ್ಯಾಪ್ ಮಾಡಿ. ಬಳಿಕ ಪಾವತಿಗಳನ್ನು ಟ್ಯಾಪ್ ಮಾಡಿ. ಪಾವತಿ ವಿಧಾನದ ಅಡಿಯಲ್ಲಿ ಸಂಬಂಧಿಸಿದ ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡುವ ಮೂಲಕ ವ್ಯೂ ಅಕೌಂಟ್ ಬ್ಯಾಲೆನ್ಸ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ UPI ಪಿನ್ ನಮೂದಿಸುವ ಮೂಲಕ ಬ್ಯಾಲೆನ್ಸ್ ಪರಿಶೀಲಿಸ ಬಹುದು.
ಇನ್ನೂ ಹಣವನ್ನು ಕಳುಹಿಸುವಾಗ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಿಬದುದಾಗಿದ್ದು, ಮೊದಲಿಗೆ ಪಾವತಿ ಸಂದೇಶದ ಪರದೆಯಿಂದ ನಿಮ್ಮ ಲಭ್ಯವಿರುವ ಪಾವತಿ ವಿಧಾನವನ್ನು ಟ್ಯಾಪ್ ಮಾಡಿ. ಬಳಿಕ ವೀವ್ ಅಕೌಂಟ್ ಬ್ಯಾಲೆನ್ಸ್ ಮೇಲೆ ಟ್ಯಾಪ್ ಮಾಡಿ. ವಾಟ್ಸ್ಆ್ಯಪ್ ಖಾತೆಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ದರೆ, ನಂತರ ಸಂಬಂಧಿತ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ನಿಮ್ಮ UPI ಪಿನ್ ನಮೂದಿಸಿ ಖಾತೆಯಲ್ಲಿನ ಹಣದ ವಿವರನ್ನು ತಿಳಿದುಕೊಳ್ಳಬಹುದು.