ಉತ್ತರಾಖಂಡ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 54 ಸಾವಿರಕ್ಕೂ ಅಧಿಕ ಮತಗಳಿಂದ ಪ್ರಚಂಡ ಜಯ ಗಳಿಸಿದ್ದಾರೆ.
ಚಂಪಾವತ್ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಕಾಂಗ್ರೆಸ್ ಅಭ್ಯರ್ಥಿಗೆ ಕೇವಲ 3,607 ಮತಗಳು ಸಿಕ್ಕಿದ್ದು, ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
ಮಾರ್ಚ್ ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಧಾಮಿ ಅವರು ಸೋಲು ಅನುಭವಿಸಿದ್ದರು. ಆದರೂ ಧಾಮಿ ಅವರನ್ನೇ ಬಿಜೆಪಿ ಹೈಕಮಾಂಡ್ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಹೀಗಾಗಿ ಸಿಎಂ ಆದ ಆರು ತಿಂಗಳ ಒಳಗೆ ಶಾಸಕರಾಗಿ ಆಯ್ಕೆ ಆಗುವುದು ಧಾಮಿ ಅವರಿಗೆ ಅನಿವಾರ್ಯವಾಗಿತ್ತು.
ಸಿಎಂ ಧಾಮಿ ಅವರಿಗಾಗಿ ಶಾಸಕ ಕೈಲಾಶ್ ಚಂದ್ರ ಘಟೋರಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆ ಮೂಲಕ ಉಪ ಚುನಾವಣೆಯಲ್ಲಿ ಧಾಮಿ ಸ್ಪರ್ಧಿಸಿ ಈಗ ವಿಧಾನಸಭೆ ಪ್ರವೇಶಿಸಿದ್ದಾರೆ.