ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವಿರುವ ಉತ್ತರಪ್ರದೇಶದಲ್ಲಿ ಹಾಡಹಗಲೇ ಬಿಜೆಪಿ ಮುಖಂಡನ್ನು ಶೂಟೌಟ್ ಮಾಡಿ ಹತ್ಯೆ ಮಾಡಲಾಗಿದೆ.
ಮೊರದಾಬಾದ್ನ ಪಕ್ವಾಡಾ ಬಿಜೆಪಿ ಮುಖಂಡ 34 ವರ್ಷದ ಸಂಭಲ್ ಅಂಜು ಚೌಧರಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಸಂಜೆ 6 ಗಂಟೆ ವೇಳೆಗೆ ತಮ್ಮ ಸಹೋದರ ಪುನಿತ್ ಜೊತೆಗೆ ತಮ್ಮ ಅಪಾರ್ಟ್ಮೆಂಟ್ನ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಶೂಟೌಟ್ ಮಾಡಿ ಚೌಧರಿ ಅವರನ್ನು ಕೊಲೆ ಮಾಡಿದ್ದಾರೆ.
ತಕ್ಷಣವೇ ಚೌಧರಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತ್ತಾದರೂ ಬದುಕುಳಿಯಲಿಲ್ಲ.
ಇತ್ತೀಚೆಗೆ ಬ್ಲಾಕ್ ಮುಖ್ಯಸ್ಥನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ 17 ಮತಗಳಿಂದ ಸೋತಿದ್ದರು. ಚೌಧರಿ ಕುಟುಂಬಸ್ಥರು ಅಮಿತ್ ಚೌಧರಿ ಮತ್ತು ಅನಿಕೇತ್ ಮತ್ತು ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ADVERTISEMENT
ADVERTISEMENT