`ಮನೆ, ಕಟ್ಟಡಗಳ ನೆಲಸಮ ಪ್ರತೀಕಾರ ಕ್ರಮವಾಗಕೂಡದು’ ಎಂದು ಹೇಳಿರುವ ಸುಪ್ರೀಂಕೋರ್ಟ್ ಹಿಂಸಾಚಾರ ಬಳಿಕ ಕೈಗೊಳ್ಳಲಾದ ಕಟ್ಟಡಗಳ ನೆಲಸಮ ಸಂಬAಧ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
`ನಿಯಮಗಳ ಪ್ರಕಾರವೇ ಕಟ್ಟಡಗಳ ನೆಲಸಮ ಪ್ರಕ್ರಿಯೆ ನಡೆಯಬೇಕು, ಅದು ಪ್ರತೀಕಾರದ ಕ್ರಮ ಆಗಬಾರದು. ಎಲ್ಲವೂ ಪಾರದರ್ಶಕವಾಗಿರಬೇಕು. ಅಧಿಕಾರಿಗಳು ನಿಯಮದ ಪ್ರಕಾರವೇ ನಡೆದುಕೊಳ್ಳಬೇಕು. ಆದರೆ ನಾವು ಡೆಮಾಲಿಷನ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಆದರೆ ಅದು ಕಾನೂನು ಪ್ರಕಾರವೇ ನಡೆಯಬೇಕು’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಂ ನಾಥ್ ಅವರಿದ್ದ ಪೀಠ ಹೇಳಿದೆ.
ಅಗತ್ಯ ಕಾನೂನು ಕ್ರಮ ಪಾಲಿಸದೇ ನೆಲಸಮ ಪ್ರಕ್ರಿಯೆ ಕೈಗೊಳ್ಳಬಾರದು ಮತ್ತು ನೆಲಸಮ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಜಮಾತ್ ಉಲೇಮಾ ಇ ಹಿಂದ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
`ಈ ಸಂದರ್ಭದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ. ಸುರಕ್ಷತೆಯನ್ನು ನಾವು ಖಚಿತಪಡಿಸಿಕೊಳ್ಳಬೇಕಾಗಿದೆ. ಈ ಕೋರ್ಟ್ಗೆ ರಕ್ಷಣೆಗೆ ಬರದೇ ಹೋದರೆ ಸರಿ ಇರಲ್ಲ. ನಾವು ಕೂಡಾ ನೋಡುತ್ತಿದ್ದೇವೆ, ನಾವು ಕೂಡಾ ಸಮಾಜದ ಭಾಗ. ನಾವು ಕೂಡಾ ಏನಾಗ್ತಿದೆ ಎಂದು ನೋಡುತ್ತಿದ್ದೇವೆ. ಕೆಲವು ಬಾರಿ ನಮಗೂ ಕೆಲವು ಅಭಿಪ್ರಾಯ ಬರುತ್ತದೆ. ದುಮ್ಮಾನ ಸಂಬAಧ ನಾವು ರಕ್ಷಣೆಗೆ ಬರದಿದ್ದರೆ ಅದು ಸೂಕ್ತವಲ್ಲ’
ಎಂದು ಪೀಠ ಅಭಿಪ್ರಾಯಪಟ್ಟಿದೆ.