ಸುಪ್ರೀಂಕೋರ್ಟ್ನ ಮುಂದಿನ ಹಾಗೂ 49 ನೇ ಮುಖ್ಯನ್ಯಾಯಮೂರ್ತಿಯಾಗಿ ಯುಯು ಲಲಿತ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಮುಖ್ಯನ್ಯಾಯಮೂರ್ತಿಯಾಗಿರುವ ಎನ್.ವಿ.ರಮಣ ಅವರ ಅಧಿಕಾರಾವಧಿ ಇದೇ ಅಗಸ್ಟ್ 26 ರಂದು ಮುಕ್ತಾಯಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಎನ್ವಿ ರಮಣ ಅವರ ಯುಯು ಲಲಿತ್ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಅಗಸ್ಟ್ 27 ರಂದು ಹಿರಿಯ ನ್ಯಾಯಮೂರ್ತಿ ಯುಯು ಲಲಿತ್ ಸುಪ್ರೀಂಕೋರ್ಟ್ನ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ತಮ್ಮ ನಿವೃತ್ತಿಯಾಗುವ ಹೊತ್ತಿಗೆ ತಮ್ಮ ಉತ್ತರಾಧಿಕಾರಿಯನ್ನು ಸರ್ಕಾರಕ್ಕೆ ಶಿಫಅರಸ್ಸು ಮಾಡುವುದು ವಾಡಿಕೆಯಾಗಿದೆ. ತಮ್ಮ ನಂತರ ಸುಪ್ರೀಂಕೋರ್ಟ್ನಲ್ಲಿನ ಹಿರಿಯ ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಗುತ್ತದೆ.
ಅಗಸ್ಟ್ 27 ರಂದು ಅಧಿಕಾರ ಸ್ವೀಕರಿಸಲಿರುವ ನ್ಯಾಯಮೂರ್ತಿ ಉಮೇಶ್ ಉದಯ್ ಲಲಿತ್ ಅವರ ಅಧಿಕಾರಾವಧಿ ಕೇವಲ 3 ತಿಂಗಳು ಮಾತ್ರ ಇರಲಿದೆ.