ADVERTISEMENT
ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಸೋಮಣ್ಣ ಅವರನ್ನು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ ಸಂಸದ ಜಿ ಎಸ್ ಬಸವರಾಜು ಅವರೇ ಮಾಹಿತಿ ನೀಡಿದ್ದಾರೆ.
ನನ್ನದಾಯ್ತು, ನನ್ನ ಸೀಟ್ನ್ನು ಸೋಮಣ್ಣಗೆ ಕೊಡ್ತಾರೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ, ನಾನು ದೆಹಲಿಗೆ ಹೋಗಿ ಹೇಳಿದ್ದೇನೆ.
ಎಂದು ತುಮಕೂರಲ್ಲಿ ನಡೆದ ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಸಂಸದ ಬಸವರಾಜು ಅವರು ಹೇಳಿದ್ದಾರೆ.
ಮುಂದೆ ಬರುವವರನ್ನು ಉಪಯೋಗಿಸಿಕೊಳ್ಳಿ, ಇಬ್ಬಗೆ ನೀತಿ ಮಾಡ್ಕೋಬೇಡಿ. ಇವರ ಮೇಲೆ ಅವರನ್ನು ಅವರ ಮೇಲೆ ಇವರನ್ನು ಎತ್ತಿಕಟ್ಟಬೇಡಿ.
ನಾನು 8 ಸಲ ನಿಂತಿದ್ದೇನೆ, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತಿದ್ದೇನೆ. ನಮ್ಮವರೇ ನನ್ನನ್ನು ಸೋಲಿಸಿದ್ದು. ನಾನು ಸೋತರೂ ಒಂದೇ ಗೆದ್ದರೂ ಒಂದೇ ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ
ಎಂದು ಸಂಸದ ಬಸವರಾಜು ಹೇಳಿದ್ದಾರೆ.
ADVERTISEMENT