ಮೈಸೂರು-ಬೆಂಗಳೂರು-ಚೆನ್ನೈ (Mysuru-Bengaluru-Chennai) ನಡುವೆ ನವೆಂಬರ್ 11ರಿಂದ ಅರೆ ಅತೀ ವೇಗದ ರೈಲು (Semi High Speed Train) ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಾಟ ಆರಂಭಿಸಲಿದೆ. ಪೂರ್ವಭಾವಿಯಾಗಿ ಇವತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ.
ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಬೆಂಗಳೂರಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ಮತ್ತು ಶತಾಬ್ದಿ (Shatabdi Rail) ರೈಲು:
ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಓಡುವ ರೈಲು ದಕ್ಷಿಣ ಭಾರತದಲ್ಲಿ ಸಂಚಾರ ಆರಂಭಿಸಲಿರುವ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಈ ರೈಲು 16 ಬೋಗಿಗಳನ್ನು ಹೊಂದಿದೆ.
ದಕ್ಷಿಣ ಭಾರತದಲ್ಲಿ ಸಂಚಾರ ಆರಂಭಿಸಲಿರುವ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೇಶದಲ್ಲಿ ಈಗಾಗಲೇ ಸಂಚಾರದಲ್ಲಿರುವ ನಾಲ್ಕು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವೇಗಕ್ಕೆ ಹೋಲಿಸಿದರೆ ನಿಧಾನವಾಗಿ ಸಂಚರಿಸಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗಂಟೆಗೆ ಗರಿಷ್ಠ 160-180 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆಯಾದರೂ ಇದು ಸಂಚರಿಸುವ ವೇಗ ಗಂಟೆಗೆ 75ರಿಂದ 77 ಕಿಲೋ ಮೀಟರ್.
ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಹೋಲಿಸಿದರೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕೆಲವೇ ನಿಮಿಷ ಮೊದಲು ಸಂಚರಿಸಲಿದೆ.
ಚೆನ್ನೈನಿಂದ ಬೆಂಗಳೂರು ಮೂಲಕ ಮೈಸೂರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದ ಅವಧಿ: 6 ಗಂಟೆ 40 ನಿಮಿಷ, ಸರಾಸರಿ ವೇಗ: ಗಂಟೆಗೆ 75.60 ಕಿಮೀ.
ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದ ಅವಧಿ: 7 ಗಂಟೆ 45 ನಿಮಿಷ. ಸರಾಸರಿ ವೇಗ: ಗಂಟೆಗೆ 75.60 ಕಿಮೀ.
ಶತಾಬ್ದಿ ಎಕ್ಸ್ಪ್ರೆಸ್ ರೈಲು: ಮೈಸೂರು-ಬೆಂಗಳೂರು-ಚೆನ್ನೈ: ಸರಾಸರಿ ವೇಗ: 69.15 ಕಿಮೀ. ಅವಧಿ: 7 ಗಂಟೆ 15 ನಿಮಿಷ.
ಶತಾಬ್ದಿ ಎಕ್ಸ್ಪ್ರೆಸ್ ರೈಲು: ಚೆನ್ನೈ-ಬೆಂಗಳೂರು-ಮೈಸೂರು: ಸಂಚಾರದ ಅವಧಿ: 7 ಗಂಟೆ. ಸರಾಸರಿ ವೇಗ: 72.04 ಕಿಮೀ.
ಬೆಂಗಳೂರಲ್ಲಿ ಎಲ್ಲಿ ನಿಲ್ಲುತ್ತೆ..?:
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಕೆಎಸ್ಆರ್ ಬೆಂಗಳೂರು)ದ ಪ್ಲ್ಯಾಟ್ ಫಾರಂ ಸಂಖ್ಯೆ 7ರಿಂದ ಈ ರೈಲು ನಿರ್ಗಮಿಸಲಿದೆ.
ಈಗಾಗಲೇ ಸಂಚರಿಸುತ್ತಿರುವ 4 ವಂದೇ ಭಾರತ್ ರೈಲುಗಳು:
1. ನವದೆಹಲಿ-ವಾರಾಣಸಿ ನಡುವೆ
2. ನವದೆಹಲಿ -ಕತ್ರಾ ನಡುವೆ
3. ಅಹಮದಾಬಾದ್ – ಮುಂಬೈ
4. ನವದೆಹಲಿ – ಅಂಬ್ ಅಂದೌರ
ADVERTISEMENT
ADVERTISEMENT