ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಮಹಾಗುರುಗಳ ಆಶೀರ್ವಾದ ಸಿಕ್ಕಿದೆ. ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್‌ಬಾಸ್‌ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ವರ್ತೂರು ಸಂತೋಷ್ ಅವರನ್ನು ಕರೆದು, ‘ನೀವು ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋ ಒಂದಿದೆ. ಹಾಕಿಸಿಕೊಂಡು ಬಂದ ದಿನದಿಂದಲೇ ನೆಮ್ಮದಿ ಹೋಯ್ತು’ ಎಂದು ಹೇಳಿದ್ದಾರೆ. ಅದನ್ನು ವರ್ತೂರು ಒಪ್ಪಿಕೊಂಡಿದ್ದಾರೆ ಕೂಡ.
ಕೊರಳಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದಡಿಯಲ್ಲಿ ಬಿಗ್‌ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು. ಈ ಬಂಧನದ ಬಳಿಕ ವರ್ತೂರು ಸಂತೋಷ್ ಅವರ ಪತ್ನಿ ಕಡೆಯವರು ಕೂಡಾ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ವರ್ತೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ADVERTISEMENT
ADVERTISEMENT